Banner Ad

ಸುದ್ದಿ ಕನ್ನಡ ವಾರ್ತೆ

ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರು ಇದ್ದ ಬೋಟ್ ಮಂಗಳವಾರ ಗೋಕರ್ಣದ ತದಡಿ ಬಂದರಿನ ಬಳಿ ಅಲೆಗಳ ಅಬ್ಬರಕ್ಕೆ ಮುಳುಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ತಳಿಯ ಮೀನುಗಾರರ ಸಹಾಯದಿಂದ ಈ ಮೀನುಗಾರಿಕಾ ಬೋಟ್ ನಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

Banner Ad

ಲಕ್ಷ್ಮಿ ಕೃಪ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮಂಗಳವಾರ ಸದಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಇದು ಸುರೇಂದ್ರ ಹರಿಕಂತ್ರ ರವರಿಗೆ ಸೇರಿದ ಬೋಟ್ ಎನ್ನಲಾಗಿದೆ. ಬಾರಿ ಅಲೆಗಳ ರಬಸಕ್ಕೆ ಬೋಟ್ ತಳಭಾಗ ಹಾನಿಗೊಳಗಾಗಿ ಸಮುದ್ರದಲ್ಲಿ ಬೋಟ್ ಮುಳುಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆಯಲ್ಲಿ ಸುಮಾರು 20 ಲಕ್ಷ ರೂ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ತದಡಿ ಆಳವೆಯಲ್ಲಿ ಭಾರಿ ಪ್ರಮಾಣದ ಹೂಳು ತುಂಬಿರುವುದರಿಂದ ಇಂತಹ ಘಟನೆ ಮರುಕಳಿಸುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಕೂಡಲೇ ಹೂಳೆತ್ತುವ ಕಾರ್ಯ ಕೈಗೊಂಡು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.

 

ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀ ಕೃಪಾ’ ಹೆಸರಿನ ಬೋಟ್‌ ಇಂದು ತದಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೆ ಬಂದರಿನಿಂದ ಸ್ವಲ್ಪ ದೂರದಲ್ಲೇ ಹೂಳು ತುಂಬಿಕೊಂಡಿರುವ ಅಳವೆಯಲ್ಲಿ ಸಿಲುಕಿಕೊಂಡಿದೆ. ಬಳಿಕ ಭಾರೀ ಅಲೆಗಳ ಹೊಡೆತಕ್ಕೆ ಬೋಟ್‌ನ ತಳಭಾಗ ಹಾನಿಗೊಳಗಾಗಿ ಸಮುದ್ರದಲ್ಲಿ ಮುಳುಗಿದೆ.

ಈ ಅವಘಡದಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ಸ್ಥಳೀಯ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

 

ಇದೇ ಸ್ಥಳದಲ್ಲಿ ಎರಡು ದಿನಗಳ ಹಿಂದೆಯಷ್ಟೇ ‘ಶ್ರೀದೇವಿ’ ಹೆಸರಿನ ಮತ್ತೊಂದು ಬೋಟ್ ಮುಳುಗಡೆಯಾಗಿತ್ತು.

Banner Ad