ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ಚಾಮರಾಜನಗರ ಹೊನ್ನೂರ ತಾಲೂಕಿನಲ್ಲಿ ಅರಣ್ಯ ಇಲಾಖೆ ಮೂವರು ರೈತರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದು ಜೋಯಿಡಾ ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಇದು ಸ್ಥಳೀಯ ರನ್ನು ಕಾಡಿನಿಂದ ಹೊರಗೆ ಹಾಕಿ, ಕಾಡನ್ನು ಲೂಟಿ ಮಾಡುವ ಅರಣ್ಯ ಅಧಿಕಾರಿಗಳ ತಂತ್ರವಾಗಿದೆ ಇದನ್ನು ಜಿಲ್ಲಾ ಕುಣಬಿ ಸಮಾಜ ಖಂಡಿಸುತ್ತದೆ ಎಂದು ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಹ ಘಟನೆಗಳಿಂದ ಸ್ಥಳಿಯ ಮೂಲ ನಿವಾಸಿಗಳು, ಕುಣಬಿ ಗಳಂತೆ ಅನೇಕ ಬುಡಕಟ್ಟುಗಳು ಕಾಡಿನಲ್ಲಿ ತಲೆತಲಾಂತರದಿಂದ ವಾಸಿಸುವ ಜನರನ್ನು ಹೆದರಿಸಿ, ಧೈರ್ಯ ಕುಗ್ಗಿಸಿ ಕಾಡಿನಿಂದ ಹೊರಗೆ ಹಾಕುವ ತಂತ್ರವಾಗಿದೆ. ಇಲ್ಲಿರುವವರು ಕಳ್ಳ ಬೇಟೆಗಾರರು ಆಗಿರದೇ ಸ್ಥಳಿಯ ರೈತರು ಆಗಿದ್ದಾರೆ ಈ ಬಗ್ಗೆ ಹೊನ್ನೂರು ಪೋಲಿಸ್ ಠಾಣೆಯಲ್ಲಿ ಅರಣ್ಯ ಇಲಾಖೆಯ ಕೃತ್ಯ ಮಾಡಿದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಸ್ಥಳೀಯರು ಕಾಡಿಗೆ ಹೋಗುವುದು ತಪ್ಪಲ್ಲ. . ಇದು ಅವರ ಬದುಕಿನ ಹಕ್ಕು. ಜೊಯಿಡಾ ತಾಲೂಕಿನಲ್ಲಿ ಬಂದೂಕು ಕೈ ಯಲ್ಲಿ ಹಿಡಿದು ತಿರುಗಾಡುವ ಅರಣ್ಯ ಅಧಿಕಾರಿಗಳು ಇದ್ದಾರೆ. ಇವರು ಮುಂದೊಂದು ದಿನ ನಮ್ಮವರ ಮೇಲೆ ಸುಳ್ಳು ಆರೋಪ ಹೊರಿಸಿ ಗುಂಡು ಹಾರಿಸಬಹುದು. ಈಗಲೇ ಮೇಲಾಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇಂತದಕ್ಕೆಲ್ಲ ನಮ್ಮ ಜನ ಹೆದರಬಾರದು.ಜೋಯಿಡಾ ದಲ್ಲಿ ಇರುವ ಶೇಕಡಾ 87 ರಷ್ಟು ಕಾಡು ಅರಣ್ಯ ಇಲಾಖೆ ಯದ್ದು ಅಲ್ಲ, ಸ್ಥಳೀಯರು ಕಾಪಾಡಿ ಇಟ್ಟಿದ್ದು ದೇಶದ ಆಸ್ತಿಯಾಗಿದೆ. ನಮ್ಮ ಬೆವರಿನ ಕಣ ದಿಂದ ಸಂಬಳ ಪಡೆದು ರಕ್ಷಣೆ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳು ಇಲ್ಲಿ ಬಂದಿದ್ದಾರೆ. ಇವರು ಕಾಗದ ಮೇಲಿನ ಅರಣ್ಯ ರಕ್ಷಕರು ಆದರೆ ನಿಜವಾದ ಅರಣ್ಯ ರಕ್ಷಣೆ ನಮ್ಮ ರಕ್ತದಲ್ಲಿದೆ. ಅರಣ್ಯ ರಕ್ಷಣೆ ಪಾಠ ಯಾರಿಂದ ಕಲಿಯಬೇಕಾಗಿಲ್ಲ.
ಅರಣ್ಯದಲ್ಲಿ ಯಾರ ಮೇಲೆಯೇ ಆರೋಪ ಕಂಡು ಬಂದರೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಗುಂಡಿಕ್ಕಿ ಕೊಲ್ಲುವ ಅಧಿಕಾರ ಅರಣ್ಯ ಸಿಬ್ಬಂದಿಗೆ ನೀಡಿದವರು ಯಾರು ? ಇಂತವರನ್ನು ಸೇವೆಯಿಂದ ವಜಾ ಮಾಡಬೇಕು. ಹುನ್ನೂರಿನಲ್ಲಿ ಕುಟುಂಬಸ್ಥರ ಬೇಡಿಕೆಯಂತೆ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು. ಎರಡು ಕೋಟಿ ಪರಿಹಾರ ನೀಡಬೇಕು. ಸರ್ಕಾರ ಈಗಾಗಲೇ ನೇಮಿಸಿದ ನ್ಯಾಯಾಂಗ ತನಿಖೆಗೆ ಪಾರದರ್ಶಕ ವಾಗಿರಬೇಕು. ಯಾವುದೇ ಪ್ರಭಾವಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕಬಾರದು. ಮಾನವ ಬದುಕಿನ ಹಕ್ಕುಗಳನ್ನು ಮೇಲೆತ್ತಿ ಹಿಡಿಯಬೇಕು. ಕಾಡು ಪ್ರಾಣಿಗಳಂತೆ ಸ್ಥಳೀಯ ಮೂಲ ನಿವಾಸಿಗಳು, ಬುಡಕಟ್ಟು ಗಳಿಗೆ ಬದುಕಲು ತೊಂದರೆ ನೀಡಬಾರದು. ಇದು ಕೊನೆಯ ಘಟನೆ ಆಗಬೇಕು. ಮರುಕಳಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದುಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ ತಿಳಿಸಿದ್ದಾರೆ. ಜೋಯಿಡಾ ದಲ್ಲಿ ಕೂಡ ಸ್ಥಳೀಯರು ರಕ್ಷಿಸಿದ ಕಾಡಿನಿಂದ ವಿವಿಧ ಯೋಜನೆ ಗಳಾದ, ಹೋರ್ನ್ ಬಿಲ್ ಯೋಜನೆ ಅಣಶಿ ರಾಷ್ಟ್ರೀಯ ಅರಣ್ಯ ಯೋಜನೆ, ಹುಲಿ ಯೋಜನೆ, ಆನೆ ಕಾರಿಡಾರ, ಕಸ್ತೂರಿ ರಂಗನ್ ಯೋಜನೆ, ಪರಿಸರ ಸೂಕ್ಷ್ಮ ಯೋಜನೆ, ಗಳೆಲ್ಲ ಬಂದಿವೆ, ಜೋಯಿಡಾ ಅರಣ್ಯಕ್ಕೆ ಈಗ ಕಸ್ತೂರಿ ರಂಗನ್ ವರದಿ ಮಾರಕವಾಗಿ ಪರಿಣಮಿಸಿದೆ, ಜನಪ್ರತಿನಿದಿ ಗಳು ಈ ಬಗ್ಗೆ ಜನರೊಂದಿಗೆ ಬಂದು ಖಂಡಿಸಬೇಕಿತ್ತು . ಕೇರಳ ದಲ್ಲಿ ಅಲ್ಲಿನ ಸರಕಾರ ಜನರೊಂದಿಗೆ ನಿಂತ ಕಾರಣ ಅಲ್ಲಿ ಸ್ಥಳೀಯರು ಬದುಕಲು ಇಂತ ನಿಯಮಗಳು ತೊಂದರೆ ನೀಡುತ್ತಿಲ್ಲ,ಎಂದಿದ್ದಾರೆ.ಜೋಯಿಡಾ ದಲ್ಲಿ ಕೂಡ ಜನರ ಮತ ಪಡೆದವರು ಜನರ ದ್ವನಿ ಯಾಗಬೇಕೇ ಹೊರತು ಜನರನ್ನು ಬಲಿ ಪಡೆಯಬಾರದು, ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
