ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನ ಗುಂದ ಗ್ರಾಮ ಪಂಚಾಯತದ ವ್ಯಾಪ್ತಿಯಲ್ಲಿ ಸಂಭ್ರಮ ಸಡಗರಗಳ ನಡುವೆ 80 ನೆ ಸ್ವಾತಂತ್ರೋತ್ಸವನ್ನು ಆಚರಿಸಿದರು.
ಬೆಳಿಗ್ಗೆಯಿಂದಲೇ ಹಳ್ಳಿ ಹಳ್ಳಿಗಳಿಂದ ಶಾಲೆ, ಹೈ ಸ್ಕೂಲ್ ವಿದ್ಯಾರ್ಥಿಗಳು ತಮ್ಮ ತಮ್ಮ ಭಾಷಣ ಹಾಡು ನೃತ್ಯಗಳ ಸಿದ್ಧತೆಯೊಂದಿಗೆ ಶಾಲೆಗಳಿಗೆ ಆಗಮಿಸಿದರು.
ನಂದಿಗದ್ದ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್. ವಿ ದಾನಗೇರಿ ಧ್ವಜಾರೋಹಣ ನಡೆಸಿದರೆ, ಅರಣ್ಯ ಇಲಾಖೆಯವರು ಊರಿನ ಗ್ರಾಮಸ್ಥರನ್ನು ಕರೆದು 80 ನೆ ಸ್ವಾತಂತ್ರೋತ್ಸವನ್ನು ವಲಯ ಅರಣ್ಯಾಧಿಕಾರಿ ವಿಜಯ ಕುಮಾರ ಅವರ ನೇತೃತ್ವದಲ್ಲಿ ನಂದಿಗದ್ದೆ ಗುಂದ ದಲ್ಲಿ ನಡೆಸಿದರು. ಸಂತ ಅಂತೋನಿ ಚರ್ಚ್, ನಂದಿಗದ್ದೆ ಶಾಲೆ , ಹೈಸ್ಕೂಲ್ , ಯರಮುಖ ಶಾಲೆ ಅಂಗನವಾಡಿ , ಗುಂದ ನಂದಿಗದ್ದೆ, ಕರ್ಕಮನೆ ಅಂಗನವಾಡಿ ಮತ್ತು ಶಾಲೆಗಳಲ್ಲಿ ಸ್ವಾತಂತ್ರೋತ್ಸವ ಆಚರಿಸಿದರು. ಗ್ರಾಮೀಣ ಬ್ಯಾಂಕ್ ಮತ್ತು ಗ್ರಾಮ ಪಂಚಾಯತ ನಂದಿಗದ್ದೆ ಇವರು ಕೂಡ ಸಾರ್ವಜನಿಕರ ಸಮ್ಮುಖದಲ್ಲಿ 80 ನೆ ಸ್ವಾತಂತ್ರೋತ್ಸವ ವನ್ನು ವಿಜೃಂಭಣೆ ಯಿಂದ ಆಚರಿಸಿದರು.
ಹಾಡು ನೃತ್ಯಗಳ ಜೊತೆಗೆ ಭಾಷಣಗಳು ಮಕ್ಕಳಿಂದ ನಡೆದವು.
ಇದೇ ಮೊದಲ ಬಾರಿಗೆ ಆಶ್ರಯ ಸಂಸ್ಥೆ ಗುಂದ ಇದರ ಅಧ್ಯಕ್ಷ ಆನಂದ ಫರ್ನಾಂಡಿಸ್ ಅವರು ತಮ್ಮ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಬಹುಮಾನ ವಿತರಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವ ಬರವಸೆ ಆನಂದ ಫರ್ನಾಂಡಿಸ್ ನೀಡಿದರು.
ಈ ಸಲದ ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡಕ್ಕೆ 125ಕ್ಕೆ 125 ಅಂಕ ಪಡೆದ ಕುಮಾರಿ ಪ್ರೀತಿ ರವೀಂದ್ರ ಸಾವರಕರ ಇವಳಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಧಿಕಾರಿಗಳು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಚಂದಗಾಣಿಸಿದರು.
