Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ 1857ರ ಸ್ವಾತಂತ್ರ ಸಂಗ್ರಾಮದ ವೇಳೆ ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರಿನಲ್ಲಿ ಆಗಸ್ಟ್ 15,1957ರಲ್ಲಿ ತಾಲೂಕಿನ ಜಗಲಬೆಟ ಗ್ರಾಮದಲ್ಲಿ ಒಂದು ಸ್ಮಾರಕ ಕಟ್ಟಿದ್ದು ಇತ್ತು,

Banner Ad

ಅದು ಜೋಯಿಡಾ ತಾಲೂಕು ಮಾಜಿ ಸೈನಿಕರ ಸಂಘಕ್ಕೆ ಕೆಲ ವರ್ಷಗಳ ಹಿಂದೆ ಗಮನಕ್ಕೆ ಬಂದಾಗ ತಾಲೂಕಿನ ಎಲ್ಲಾ ಮಾಜಿ ಸೈನಿಕರು ಸೇರಿ ಆಗಷ್ಟ್ 15 ರಂದು ಮತ್ತು ಜನೆವರಿ 26 ರಂದು ದೇಶಕ್ಕಾಗಿ ಪ್ರಾಣ ನೀಡಿದವರ ಸ್ಮರಣೆಗೆ ಧ್ವಜಾರೋಹಣ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಇಂದು ಕೂಡ ಸ್ವಾತಂತ್ರ್ಯ ದಿನಾಚರಣೆಯ ಶುಭ ಸುದರ್ಭದಲ್ಲಿ ಬಲಿಧಾನ ಮಾಡಿದವರ ನೆನಪಿಗೆ ರಾಷ್ಟ್ರ ದ್ವಜಾರೋಹಣ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ,ಅವರು ಆಗಮಿಸಿ ಮಾತನಾಡುತ್ತಾ ಭಾರತ ಮಾತೆಯ ಗೌರವ ಹಾಗು ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ, ಈ ಸ್ಮಾರಕವನ್ನು ನೋಡಿ ನಮ್ಮ ತಾಲೂಕಿನ ಯುವಜನತೆಗೆ ಹಾಗು ನಮ್ಮೆಲ್ಲರಲ್ಲಿ ದೇಶ ಭಕ್ತಿ ಬರಬೇಕು ಆ ಮೂಲಕ ನಾವು ಬಲಿದಾನ ನೀಡಿದವರನ್ನು ಸ್ಮರಿಸ ಬೇಕು,ಹಿಂದೆ ದೇಶದ ಬಹಳ ವೀರರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ, ಅದನ್ನು ಕಾಪಾಡುವ ಕೆಲಸ ನಮ್ಮದು. ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ಇರಬೇಕು ನಾವೆಲ್ಲರೂ ವಂದೇಮಾತರಂ ಎಂಬ ಬಾವದಲ್ಲಿ ಬಾಳಬೇಕು ಎಂದು ಹೇಳಿದರು. ನಿವೃತ್ತ ಶಿಕ್ಷಕರಾದ ಬಿರ್ಜೆ ಯವರು ಮಾತನಾಡಿ ಸ್ವಾತಂತ್ರ ಸಂಗ್ರಾಮದ ಬಗ್ಗೆ ವಿಸ್ತಾರವಾಗಿ ಹೇಳಿದರು.
ಈ ಸಂಧರ್ಭದಲ್ಲಿಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ್, ಮೋಹನ್, ರಾಜೇಶ್, ಅಪ್ಪಾರಾವ್, ಅನಿಲ್,ಅರಣ್ಯ ಇಲಾಖೆಯ ಸಿಬ್ಬಂದಿಗಳು , ಗ್ರಾಮ ಪಂಚಾಯತ ಪಿ ಡಿ ಓ,ಊರಿನ ಹಿರಿಯರು, ನಾಗರಿಕರು,ಮಾಜಿ ಸೈನಿಕರ ಸಂಘದ ಸದಸ್ಯರಾದ, ಸಂಜಯ, ವಿಲಾಸ, ಪಾಂಡುರಂಗ, ನಂದಾ, ಮಾರುತಿ,ರತ್ನಾಕರ,ಇತರರು ಉಪಸ್ಥಿತರಿದ್ದರು.

Banner Ad