ಸುದ್ದಿ ಕನ್ನಡ ವಾರ್ತೆ
ಕುಮಟಾ:ಪಟ್ಟಣದಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷದ ಸಂಭ್ರಮ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ತಿರಂಗಾ ಯಾತ್ರೆ ಮಾಡಲಾಯಿತು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ ಮಾತನಾಡಿ, ಸಾವಿರಾರು ಜನರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರಣೆ ನೀಡಿರುವ ವಂದೇ ಮಾತರಂ ಗೀತೆಯ ಹಿನ್ನೆಲೆಯನ್ನು ಇವತ್ತಿನ ಯುವಕರು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಆ ಉದ್ದೇಶದಿಂದ ದೇಶಾದ್ಯಂತ ಎಬಿವಿಪಿಯಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎಬಿವಿಪಿಯ ಜನಜಾತಿ ಕಾರ್ಯದ ರಾಷ್ಟ್ರೀಯ ಸಂಚಾಲಕ ನೀಲೇಶ್ ಸಾಳುಂಕೆ ಮಾತನಾಡಿ, ಇವತ್ತಿನ ಯುವಕರು ಈ ರೀತಿಯ ದೇಶಭಕ್ತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು, ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 150 ಮೀಟರ್ ಬೃಹತ್ ತಿರಂಗಾವನ್ನು ಕುಮಟಾದ ಎ.ಬಿ. ಬಾಳಿಗಾ ಕಾಲೇಜಿನಿಂದ ಶಾಂತಿಕಾ ಪರಮೇಶ್ವರಿ ದೇವರ ಹಕ್ಕಲ ದೇವಸ್ಥಾನದವರೆಗೆ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡರು. ವಿಭಾಗ ಸಂಚಾಲಕ ಯಶ್ ಬೆಣ್ಣೆ, ಸಾರ್ವಜನಿಕರು ಇದ್ದರು.
