ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಲಂಗುಟ್ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಬಾಡಿಕೆ ಕಾರಿನೊಳಗೆ ಕರ್ನಾಟಕದ 41 ವರ್ಷದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆಯಿಂದಾಗಿ ಮಂಗಳವಾರ ಕಲಂಗುಟ್ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಲಭ್ಯವಾದ ಮಾಹಿತಿಯ ಪ್ರಕಾರ ಮೃತ ವ್ಯಕ್ತಿಯನ್ನು ಕರ್ನಾಟಕದ ರಾಯಚೂರು ನಿವಾಸಿ ಷಣ್ಮುಖ ಭಾವಿಮಕಿ ಎಂದು ಗುರುತಿಸಲಾಗಿದೆ. ಮೃತದೇಹವು ಕೆಲ ದಿನಗಳಿಂದ ಈ ವಾಹನದೊಳಗೇ ಇದ್ದಿರಬಹುದು ಎಂದು ಶಂಕಿಸಲಾಗುತ್ತಿದ್ದು, ಶವ ಕೊಳೆಯಲು ಪ್ರಾರಂಭಿಸಿತ್ತು ಅಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕಲಂಗುಟ್ ಪೋಲಿಸರು- ಪಿಐ ಲಕ್ಷ್ಮೀ ಅಮೋಣಕರ್, ಪಿಎಸ್ ಐ ಪರೇಶ್ ಸಿನಾರಿ, ನೇತೃತ್ವದಲ್ಲಿ ಇತರ ಪೋಲಿಸ್ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಬಂದು ತಲುಪಿದರು. ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
