ಸುದ್ದಿ ಕನ್ನಡ ವಾರ್ತೆ
ಸಂಸತ್ ಭವನದಲ್ಲಿಂದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ಮಾಡಿ, ನಮ್ಮಉತ್ತರ ಕನ್ನಡ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕುರಿತಂತೆ ಮಾಹಿತಿ ವಿವರಿಸಿದರು.
ನಮ್ಮ ಕ್ಷೇತ್ರದ ವೈಶಿಷ್ಟತೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಮಾನ್ಯ ಪ್ರಧಾನಿಯವರು, ಕ್ಷೇತ್ರದ ಸಮಗ್ರ ವಿಕಾಸದ ವಿಷಯವಾಗಿ ತಮ್ಮ ವಿಶಾಲ ದೃಷ್ಟಿಕೋನದ ವಿಚಾರಗಳನ್ನು ಹಂಚಿಕೊಂಡು ಮಾರ್ಗದರ್ಶನ ನೀಡಿದರು.
ಮಾನ್ಯ ಪ್ರಧಾನಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.
