ಸುದ್ದಿ ಕನ್ನಡ ವಾರ್ತೆ

Goa (ಮಡಂಗಾವ್);  ಹವ್ಯಕ ಮಹಾಸಭಾ ಬೆಂಗಳೂರು ಇವರು ಸ್ಥಳೀಯ ಹವ್ಯಕರ ಸಹಕಾರದಿಂದ ಗೋವಾದ ಮಡಗಾವ್ ನಲ್ಲಿ  ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಒಟ್ಟು 14 ಸ್ಪರ್ಧೆಗಳಲ್ಲಿ 75ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಶ್ರೀ ಗಜಾನನ ಪದ್ಮನಾಭಯ್ಯ, ಡಾ. ಗಣೇಶ ಹೆಗಡೆ ಅವರು ಅಭ್ಯಾಗತರಾಗಿ ಆಗಮಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಶ್ರೀ ದೀಪಕ ಹೆಗಡೆ ಗೋಳಿಕೈ, ಶ್ರೀ ಎಸ್ ಪಿ ಭಟ್ ಶ್ರೀಮತಿ ರೇಖಾ ಹೆಗಡೆ ವೇದಿಕೆಯಲ್ಲಿ ಇದ್ದರು. ಶ್ರೀ ಗಿರೀಶ ಹೆಗಡೆ ಸ್ವಾಗತಿಸಿದರು. ಶ್ರೀಮತಿ ರೇಖಾ ಹೆಗಡೆ ವಂದಿಸಿದರು. ಶ್ರೀಮತಿ ಗಂಗೂಬಾಯಿ ನಿರೂಪಿಸಿದರು.