ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಹನುಮಾನಲೇನ್ ಕನ್ನಡ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ.ಹೆಚ್.ಭಾಗವಾನರವರು ರಾಮನಗರ ಹಾಗೂ ಅನಮೋಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

 

ತಾಲೂಕಿನ ರಾಮನಗರ ಹಾಗೂ ಅನಮೋಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಬಿ.ಹೆಚ್.ಭಾಗವಾನರವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ತಮ್ಮ ಕ್ಲಸ್ಟರಿನ ವ್ಯಾಪ್ತಿಯ ಎಲ್ಲಾ ಶಾಲೆಗಳ ಶೈಕ್ಷಣಿಕ ವಿಭಾಗದ ಪ್ರಗತಿಗೆ ಕಾಯಾ,ವಾಚಾ,ಮನಸಾ ಶ್ರಮಿಸಿದವರು.ಅದಲ್ಲದೇ ಎಲ್ಲಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳ ಪದಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವದ ಮಹತ್ವ ಮೂಡಿಸಿದವರು.ಇವರ ಸೇವಾವಧಿಯಲ್ಲಿ ರಾಮನಗರ ಕ್ಲಸ್ಟರಿನ ರಾಮನಗರ ಗ್ರಾಮ ಪಂಚಾಯತದ ಹನುಮಾನಲೇನ್ ಶಾಲೆ ಹಾಗೂ ಅಸು ಗ್ರಾಮ ಪಂಚಾಯತದ ಶಿಂದೋಳಿ ಶಾಲೆಯ ಎಸ್.ಡಿ.ಎಂ.ಸಿಗಳು ಅತ್ಯುತ್ತಮ ತಾಲೂಕಾ ಮಟ್ಟದ ಎಸ್.ಡಿ.ಎಂ.ಸಿ ಶಾಲೆಗಳಾಗಿ ಪ್ರಶಸ್ತಿಯನ್ನು ಎಲ್ಲರ ಸಹಕಾರದಿಂದ ಪಡೆದಿರುವುದು ಇವರ ಕಾರ್ಯವೈಖರಿಯ ಸಾಕ್ಷಿಯಾಗಿದೆ.

 

ಅದಲ್ಲದೇ ತಮ್ಮ ಕ್ಲಸ್ಟರಿನ ಶಾಲೆಗಳಲ್ಲಿ ಪ್ರತಿಭಾಕಾರಂಜಿ,ಕಲಿಕಾಹಬ್ಬ,ವಾರ್ಷಿಕ ಸ್ನೇಹ ಸಮ್ಮೇಳನ, ಕ್ರೀಡಾಕೂಟಗಳನ್ನು, ಶಾಲಾ ಶೈಕ್ಷಣಿಕ ವಾರ್ಷಿಕ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಸಂಘಟಿಸಿದ ಸಂಘಟನಾ ಚತುರರು.ಇವರ ಮಾರ್ಗದರ್ಶನ,ಸಹಕಾರದಲ್ಲಿ ಕ್ಲಸ್ಟರಿನ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿಯೂ ಭಾಗವಹಿಸಿದ್ದಾರೆ. ಈ ಎಲ್ಲಾ ಸಾಧನೆಗೆ ಹಾಗೂ ತಮ್ಮ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸಹಕಾರ, ಮಾರ್ಗದರ್ಶನ,ಪ್ರೋತ್ಸಾಹ ನೀಡಿದ ಜಿಲ್ಲೆಯ ಉಪನಿರ್ದೇಶಕರಿಗೆ,ಎಲ್ಲಾ ಅಧಿಕಾರಿ ವೃಂದದವರಿಗೆ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ,ಪತ್ರಾಂಕಿತ ಲೆಕ್ಕಾಧಿಕಾರಿಗಳಿಗೆ,ಶಿಕ್ಷಣ ಸಂಯೋಜಕರಿಗೆ,ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ,ದೈಹಿಕ ಶಿಕ್ಷಣ ಪರಿವೀಕ್ಷಕರಿಗೆ, ಬಿ.ಆರ್.ಪಿ ಯವರಿಗೆ, ಸಿ.ಆರ್.ಪಿ ವೃಂದದವರಿಗೆ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರಿಗೆ,ಕ್ಲಸ್ಟರಿನ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕ ವೃಂದದವರಿಗೆ,ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕ ವೃಂದದವರಿಗೆ, ಬಿಸಿಯೂಟ ತಯಾರಕ ವೃಂದದವರಿಗೆ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕ-ಪೋಷಕರಿಗೆ,ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ನೀಡಿದ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಮುಂದಿನ ಶೈಕ್ಷಣಿಕ ಸೇವೆಯಲ್ಲಿಯೂ ಎಲ್ಲರ ಸಹಕಾರ,ಮಾರ್ಗದರ್ಶನ, ಪ್ರೋತ್ಸಾಹ ಇದೇ ರೀತಿಯಲ್ಲಿ ಮುಂದುವರೆಯಲಿ ಎಂದು ಬೇಡಿಕೊಂಡಿದ್ದಾರೆ.