ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಾ ಕೇಂದ್ರ ದಲ್ಲಿ ಮುಖ್ಯ ರಸ್ತೆಗೆ ನಿರ್ಮಿಸಿದ ಗಟಾರ ಸರಿ ಇಲ್ಲದೇ , ಜಾನುವಾರುಗಳು ಜನರು ಬಿದ್ದು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಾರವಾರ ಬೆಳಗಾವಿ ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ಜೊಯಿಡಾ ಕೇಂದ್ರ ದಲ್ಲಿ ಗಟಾರಕ್ಕೆ ಮುಚ್ಚಳ ಸರಿ ಇಲ್ಲದೇ ಹಲವಾರು ಅವಘಡಗಳು ಸಂಭವಿಸುತ್ತಿವೆ. ಆದರೂ ಯಾರೂ ಇತ್ತ ಲಕ್ಷ ಹಾಕಿ ಸರಿ ಪಡಿಸುವ ಕೆಲಸ ಮಾಡದ ಕಾರಣ ಅವಘಡಗಳು ನಡೆಯುತ್ತಲೇ ಇವೆ.

 

ಮುಖ್ಯ ರಸ್ತೆಗೆ ನಿರ್ಮಿಸಿದ ಗಟಾರಕ್ಕೆ ಅಲ್ಲಲ್ಲಿ ಮುಚ್ಚಳಗಳೇ ಇಲ್ಲ ಹೀಗಾಗಿ ಒಂದೇ ತಿಂಗಳಲ್ಲಿ ಎರಡು ಸಲ ಈ ಗಟಾರ ದಲ್ಲಿ ದನಕರುಗಳು ಬಿದ್ದು ಒದ್ದಾಡಿದರೆ, ನಿನ್ನೆ ಕಾರೊಂದು ಅನಿರೀಕ್ಷಿತವಾಗಿ ಮುಚ್ಲಾವಿಲ್ಲದ ಜಾಗದಲ್ಲಿ ನಿಲುಕಿ ಕೊಂಡಿತ್ತು. ಅಲ್ಲಲ್ಲಿ ಈ ಗಟಾರದ ಮುಚ್ಚಳ ತೆರೆದಿದ್ದು ಗಮನಕ್ಕೆ ಬಾರದೇ ಅಪಘಾತಗಳು ನಡೆಯುತ್ತಿವೆ. ಸಣ್ಣ ಮಕ್ಕಳು ಬಿದ್ದರೆ ಯಾರಿಗೂ ಗೊತ್ತಾಗದೆ ಹೋಗಬಹುದು ಹಾಗಾಗಿ ಸಂಬಂಧ ಪಟ್ಟವರು, ಈ ತೆರೆದುಕೊಂಡಿರುವ ಗಟಾರಕ್ಕೆ ಅಲ್ಲಲ್ಲಿ ಮುಚ್ಚಳ ಹಾಕುವ ಮೂಲಕ ಅನಾಹುತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ಜೋಯಿಡಾ ಗ್ರಾಮ ಪಂಚಾಯತ್ ದವರಿಗೆ ಘಟಾರಕ್ಕೆ ಸಂಬಂಧ ಪಟ್ಟ ಇಲಾಖೆ ಯೊಂದಿಗೆ ಮಾತನಾಡಿ ಸರಿಪಡಿಸಬೇಕು ಎಂಬ ಕಲ್ಪನೆ ಇರಬೇಕಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇನ್ನಾದರೂ ಹತ್ತಾರು ಕಡೆ ಮುಚ್ಚಳ ಇಲ್ಲದ ಘಟಾರಕ್ಕೆ ಸಂಬಂಧ ಪಟ್ಟವರು ಮುಚ್ಚಳ ಹಾಕಿ ಅಪಘಾತ ತಪ್ಪಿಸಬೇಕಾಗಿದೆ.