ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಶಿವೋಲಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಸ್ವಾಮಿ ಸಮರ್ಥರ ಭವ್ಯ ಮೂರ್ತಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ ಮಾಡಿದ್ದ ಕರ್ನಾಟಕ ಮೂಲದ ಗೋವಾದ ವಾಸ್ಕೊ ನಿವಾಸಿ ಸಂತೋಷ ಲಮಾಣಿ ಎಂಬ ವ್ಯಕ್ತಿಯನ್ನು ಅಂಜುಣಾ ಪೋಲಿಸರು ಬಂಧಿಸಿದ್ದಾರೆ.

 

ಸಾಮಾಜಿಕ ಜಾಲತಾಣಗಳಳ್ಲಿ ಶ್ರೀ ಸ್ವಾಮಿ ಸಮರ್ಥರ ಬಗ್ಗೆ ಮಾಡಿರುವ ಆಕ್ಷೇಪಾರ್ಹ ಪೋಸ್ಟ ವಿರೋಧಿಸಿ ಮಠದ ಅಧ್ಯಕ್ಷ ನೀಲೇಶ ವೆರ್ಣೇಕರ್ ನೇತೃತ್ವದಲ್ಲಿ ಭಕ್ತಾದಿಗಳು , ಹಿಂದೂ ಸಂಘಟನೆಗಳು ಹಣಜುಣ ಪೋಲಿಸ್ ಠಾಣೆಯ ಎರದುರು ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.

ಸಂಬಂಧಿತ ಆನ್ ಲೈನ್ ಪೋಸ್ಟಗಳು ಹಿಂದೂ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರುದಾರರು ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲದೆಯೇ ತಪ್ಪಿತಸ್ಥರನ್ನು ಕೂಡಲೇ ಬಂಧಿಸದಿದ್ದರೆ ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಲಮಾಣಿ ಎಂಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.