ಸುದ್ಧಿಕನ್ನಡ ವಾರ್ತೆ
ಜಗತ್ಪ್ರಸಿದ್ಧ ಪ್ರವಾಸಿ ತಾಣ, ಅಂಬೋಲಿ ಘಾಟ್ ಮುಖ್ಯ ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಂಬೋಲಿಯು ದಟ್ಟ ಮಂಜಿನಿಂದಾಗಿ ಭೂಲೋಕದ ಸ್ವರ್ಗದಂತೆ ಕಂಡುಬರುತ್ತಿದ್ದು ಈ ಜಲಪಾತ ವೀಕ್ಷಣೆಗೆ ಕರ್ನಾಟಕ, ಗೋವಾ ದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಅಂಬೋಲಿ ಜಲಪಾತವು Amboli Falls ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅಂಬೋಲಿಯಲ್ಲಿದೆ. ಜೂನ್ ತಿಂಗಳಿಂದ ಸಪ್ಟೆಂಬರ್ ವರೆಗಿನ ಅವಧಿಯಲ್ಲಿ ಇಲ್ಲಿ ಭೇಟಿ ನೀಡಬಹುದಾಗಿದೆ. ಹೆದ್ದಾರಿಗೆ ಹೊಂದಿಕೊಂಡೇ ಈ ಜಲಪಾತವಿದ್ಧು ಸದ್ಯ ಇಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಗರ್ದಿ ಸಂಭವಿಸುತ್ತಿದೆ.
Amboli Falls ಅಂಬೋಲಿಯ ಮುಖ್ಯ ಜಲಪಾತದ ಕೆಲವೇ ಕಿಮಿ ಅಂತರದಲ್ಲಿ ಇನ್ನೂ ಕೆಲ ಸುಂದರ ಜಲಪಾತಗಳನ್ನು ವೀಕ್ಷಿಸಬಹುದಾಗಿದೆ. ಸದ್ಯ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಪಾತವು ಧುಮ್ಮಿಕ್ಕುತ್ತಿದೆ. ಈ ಜಲಪಾತದ ನೀರು ಹಾಲಿನಂತೆ ಶುಭ್ರವಾಗಿ ಕಂಗೊಳಿಸುತ್ತಿದೆ.
ಅಂಬೋಲಿಯ ಈ ಮುಖ್ಯ ಜಲಪಾತವು ಪಶ್ಚಿಮ ಘಟ್ಟಗಳ ಸೈಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿದೆ. ಈ ಜಲಪಾತವು ಮಹಾರಾಷ್ಟ್ರದ ಅಂಬೋಲಿ ಬಸ್ ನಿಲ್ದಾಣದಿಂದ ಸುಮಾರು 3 ಕಿಮಿ, ಸಾವಂತವಾಡಿಯಿಂದ ಸುಮಾರು 30 ಕಿಮಿ, ಗೋವಾದಿಂದ 70 ಕಿಮಿ ದೂರದಲ್ಲಿದೆ.
ನ ಅಂಬೋಲಿ ಜಲಪಶಾತ ವೀಕ್ಷಣೆಗೆ ಆಗಮಿಸಿದರೆ ಕವಲೇಸಾದ್ ಪಾಯಿಂಟ್, ನಾಂಗರ್ಟಾಸ್ ಜಲಪಾತಗಳು, ಹಿರಣ್ಯಕೇಶಿ ದೇವಾಲಯಕ್ಕೂ ಸಹ ಭೇಟಿ ನೀಡಬಹುದು. ಈ ಜಲಪಾತ ವೀಕ್ಷಣೆಗೆ ಆಗಮಿಸುವವರು ಮುನ್ನೆಚ್ಚರಿಕಾ ಕ್ರಮವಾಗಿ ಉತ್ತಮ ಹಿಡಿತವಿರುವ ಬೂಟ್ ಗಳನ್ನು ಧರಿಸಿಯೇ ಆಗಮಿಸುವುದು ಉತ್ತಮ ಏಕೆಂದರೆ ಜಲಪಾತ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಕಾಲು ಜಾರುವ ಸಾಧ್ಯತೆಯಿರುತ್ತದೆ. ಅಂಬೋಲಿ ಘಾಟ್ ಸುತ್ತಮುತ್ತಲಿನ ಪ್ರಮಾಸಿ ತಾಣವೆಲ್ಲವೂ ತುಂಬಾ ಎತ್ತರದ ಗುಡ್ಡದಲ್ಲಿರುವುದರಿಂದ ಪ್ರವಾಸಿಗರು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. ವೇವ್ ಪಾಯಿಂಟ್ ಗಳು ತುಂಬಾ ಅಪಾಯಕಾರಿಯಾಗಿದೆ.
