ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾಕ್ಕೆ ಬರುವ ಪ್ರವಾಸಿಗರೇ ಎಚ್ಚರ… ಗೋವಾದಲ್ಲಿ ಮೋಜು ಮಸ್ತಿಯಲ್ಲಿ ನಿಯಮ ಮೀರಿದರೆ 5000 ರೂ ದಿಂದ 1 ಲಕ್ಷ ರೂ ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ಗೋವಾ ಸರ್ಕಾರ ನೀಡಿದೆ.( Penalty ranging from Rs 5000 to Rs 1 lakh for violating the rules).

ಗೋವಾ ರಾಜ್ಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಗೋವಾಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಗೋವಾ ರಾಜ್ಯದ ಪ್ರವಾಸಿ ತಾಣಗಳಲ್ಲಿ ಮಧ್ಯ ಸೇವನೆ, ಗಾಜಿನ ಬಾಟಲಿ ಒಡೆಯುವುದು, ಅಡುಗೆ ಮಾಡುವುದು, ಕಸ ಹಾಕುವುದು, ಅಕ್ರಮ ಬೀಚ್ ಪಾರ್ಟಿ ಆಯೋಜಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದು, ಸೇರಿದಂತೆ ನಿಷೇಧಿತ ಚಟುವಟಿಕೆ ನಡೆಸುವುದು ಕಂಡುಬಂದರೆ ಭಾರಿ ದಂಡ ಹಾಗೂ ಶಿಕ್ಷೆ ವಿಧಿಸುವುದಾಗಿ ಗೋವಾ ಸರ್ಕಾರ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಡಿಸಲಾದ ಅಧಿಸೂಚನೆಯಲ್ಲಿ ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆಯ (State Tourism Department) ನಿರ್ದೇಶಕ ಕೇದಾರ್ ನಾಯಕ್ ಈ ಚಟುವಟಿಕೆಯನ್ನು “ಉಪದ್ರವ” ಎಂದು ಘೋಷಿಸಿದ್ದಾರೆ. ಗೋವಾ ಪ್ರವಾಸಿ ಸ್ಥಳಗಳ ರಕ್ಷಣೆ ಮತ್ತು ನಿರ್ವಹಣೆ ಖಾಯ್ದೆ 2001 ರ ಸೆಕ್ಷನ್ 13 ರ ಅಡಿಯಲ್ಲಿ ಈ ನಿರ್ದೇಶನಗಳನ್ನು ಜಾರಿಗೊಳಿಸಲು ಪೋಲಿಸ್ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.

ಸಾರ್ವಜನಿಕ ಪ್ರದೇಶ ಅಥವಾ ಪ್ರವಾಸಿ ಸ್ಥಳಗಳಳ್ಲಿ ಮಧ್ಯ ಸೇವನೆಯನ್ನು ನಿಷೇಧಿಸಿರುವ ಜೊತೆಗೆ ರಸ್ತೆ ಬದಿಯಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಡುಗೆ ಮಾಡುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇಷ್ಟೇ ಅಲ್ಲದೆಯೇ ಪ್ರವಾಸಿಗರ ಮೇಲೆ ಪರಿಣಾಮ ಬೀರಬಹುದಾದ ವಿವಿಧ ವಸ್ತುಗಳನ್ನು ಖರೀದಿಸುವಂತೆ ಪ್ರವಾಸಿಗರಿಗೆ ಒತ್ತಾಯಿಸುವುದು, ಭಿಕ್ಷಾಟನೆ, ಕ್ರೂಜ್ ಟಿಕೇಟ್ ಗಳನ್ನು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೇವೆಗಳ ಟಿಕೇಟ್ ಗಳನ್ನು ಅನಧೀಕೃತವಾಗಿ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. (A complete ban has been imposed on tourists cooking in tourist spots).

ಗೋವಾದ ಕಡಲ ತೀರಗಳಲ್ಲಿ ವಾಹನಗಳನ್ನು ಓಡಿಸುವುದು, ಅನುಮತಿಯಿಲ್ಲದೆಯೇ ಬೀಚ್ ಕಾರ್ಯಕ್ರಮ ಆಯೋಜಿಸುವುದು, ಅನಧೀಕೃತವಾಗಿ ಮಸಾಜ್ ನಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗೋವಾದ ಸಾರ್ವಜನಿಕ ಸ್ಥಳಗಳಳ್ಲಿ ಮತ್ತು ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಮತ್ತು ಅನಧೀಕೃತ ಚಟುವಟಿಕೆ ನಡೆಸಿದರೆ ಅಂತಹ ವ್ಯಕ್ತಿ ಅಥವಾ ಸಂಘ ಸಂಸ್ಥೆಗೆ 5000 ರೂ ದಿಂದ 1 ಲಕ್ಷ ರೂ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇಷ್ಟೇ ಅಲ್ಲದೆಯೇ ತಪ್ಪಿತಸ್ಥರ ವಿರುದ್ಧ ಪ್ರಕರಣವನ್ನೂ ದಾಖಲಿಸಬಹುದು ಎಂದು ಎಚ್ಚರಿಸಲಾಗಿದೆ.

A fine of Rs 5000 to Rs 1 lakh has been issued against such person or organization for any violation of rules and unauthorized activities in public places and tourist spots of Goa.