ಸುದ್ಧಿಕನ್ನಡ ವಾರ್ತೆ
ಹೊನ್ನಾವರ: ಯಕ್ಷಗಾನ ರಂಗದಲ್ಲಿ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿ ಹಾಸ್ಯ ಚಕ್ರವರ್ತಿ ಎಂದೇ ಜನಮನಗೆದ್ದಿದ್ದ ಖ್ಯಾತ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಗೋಡ (52) ರವರು ಶುಕ್ರವಾರ ವಿಧಿವಷರಾಗಿದ್ದಾರೆ.

ಯಕ್ಷಗಾನ ರಂಗದಲ್ಲಿ ಬಹುಬೇಡಿಕೆಯ ಹಾಸ್ಯ ಕಲಾವಿದರಾಗಿದ್ದ ಶ್ರೀಧರ ಭಟ್ ರವರು ಬೈಂದೂರು ಸಮೀಪದ ಗೋಳಿಹೊಳೆಯಲ್ಲಿ ನಡೆಯಬೇಕಿದ್ದ ಮಾಗಧ ವಧೆ ಪ್ರಸಂಗದಲ್ಲಿ ಶುಕ್ರವಾರ ಪಾತ್ರ ನಿರ್ವಹಿಸಬೇಕಿತ್ತು.

ಕಳೆದ ಸುಮಾರು ಮೂರುವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ತಮ್ಮ ಹಾಸ್ಯ ಅಭಿನಯದ ಮೂಲಕ ಜನಮನಗೆದ್ದಿದ್ದರು. ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ವಿವಿಧ ಪ್ರಸಂಗಗಳಲ್ಲಿ ಬ್ರಾಹ್ಮಣನ ಪಾತ್ರಗಳು, ಅಜ್ಜಿ ಪಾತ್ರ, ದೂತನ ಪಾತ್ರಗಳು ಶ್ರೀಧರ ಭಟ್ ರವರಿಗೆ ಖ್ಯಾತಿ ತಂದುಕೊಟ್ಟಿದ್ದವು. ಅವರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಯಕ್ಷಗಾನ ರಂಗ ಚೌಕಟ್ಟಿನಲ್ಲಿ ಪಾತ್ರ ಪೋಷಣೆ ಮಾಡುತ್ತಿದ್ದರು.