ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ಇಂದು ಶ್ರೀ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ, ತಾಲೂಕು ಆಡಳಿತ, ರಕ್ತ ನಿಧಿ ಕೇಂದ್ರ ದಾಂಡೇಲಿ, ತಾಲೂಕು ಪಂಚಾಯತ್ ಹಾಗೂ ತಾಲೂಕು ಆಸ್ಪತ್ರೆ ಜೋಯಿಡಾ ಇವರ ಸಹಯೋಗದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎನ್. ಭಾರತಿ ಉದ್ಘಾಟಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ರಕ್ತದಾನದ ಮಹತ್ವ ಕುರಿತು ಮಾತನಾಡಿದರು. ಮುಖ್ಯ ಅತಿಥಿ ಡಾ. ನೀಲಕಂಠ ರಕ್ತದಾನದ ಆರೋಗ್ಯಕರ ಪ್ರಯೋಜನಗಳನ್ನು ವಿವರಿಸಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಯೋಜನಾಧಿಕಾರಿ ಶ್ರೀ ಅಶೋಕ್ ಸೂರ್ಯವಂಶಿ ಉಚಿತ ಸ್ವ ಉದ್ಯೋಗ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಸಮಾಜಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಒಟ್ಟು 21 ಮಂದಿ ರಕ್ತದಾನ ಮಾಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ನ 70 ಮಂದಿ ಸಿಬ್ಬಂದಿಗಳಿಗೆ ಡಾ. ವಿಜಯ ಕೊಚ್ಚರಿಗಿ ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಡಾ. ಸದಾಶಿವ್, ನವೀನ್ ಕುಮಾರ್, ವಾಸುದೇವ್ ಕಿತ್ತೂರು, ದೇವು ಹಾಲಕ್ಕಿ ಹಾಗೂ ಪ್ರಶಾಂತ್ ಅಂಬಿಗರ್ ಉಪಸ್ಥಿತರಿದ್ದರು.