ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನಲ್ಲಿ ಮಳೆ ಇಲ್ಲದೆ ರೈತಾಪಿ ಜನರು ಕಂಗಾಲಾಗಿದ್ದಾರೆ. ಕಳೆದ ವಾರ ನಾಲ್ಕು ದಿನ ಸಾಧಾರಣ ಮಳೆ ಬಂದಾಗ ಇದೇ ರೀತಿ ಮಳೆ ಮುಂದೆ ಬರಬಹುದು ಎಂಬ ಭಾವನೆಯಲ್ಲಿ ಜನರಿದ್ದರು. ಆದರೆ ಮಳೆ ಇಲ್ಲದೆ ಈಗ ಬೇಸಿಗೆಯಂತೆ ಬಿಸಿಲು , ಸೆಕೆ,ನೋಡಿ ಜನರು ಕಂಗಾಲಾಗಿದ್ದಾರೆ.


ಈಗಾಗಲೇ ಬತ್ತದ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರು ಅಗೆ ಮಡಿ ತಯಾರಿಸಿದ್ದು ಮಳೆ ಇಲ್ಲದೆ ಏನು ಮಾಡೋಣ ಎಂದು ಚಿಂತಿತರಾಗಿದ್ದಾರೆ. ಬತ್ತದ ಗದ್ದೆಗಳು ನೀರಿಲ್ಲದೆ ಬಣ ಬಣ ಒಣಗುತ್ತಿವೆ. ಒಟ್ಟಾರೆ ತಾಲೂಕಿನ ಬತ್ತ ಬೆಳೆಯುವ ರೈತರು ತಗ್ಗು ಪ್ರದೇಶದಲ್ಲಿ ಅಗೆ ಮಡಿ ಮಾಡಿ ಪೈಪ್ ಮೂಲಕ ನೀರು ಹಾಯಿಸುವ ಸ್ಥಿತಿಗೆ ಬಂದಿದ್ದಾರೆ . ಮಳೆ ಬಾರದೆ ಇದ್ದರೆ ತಾಲೂಕಿನ 4500 ಹೆಕ್ಟೇರ್ ಬತ್ತ ಬೆಳೆಯುವ ಕ್ಷೇತ್ರದ ರೈತರಿಗೆ ಸಂಕಷ್ಟ ಎದುರಾಗಲಿದೆ. ಸಾಲ ಮಾಡಿ ಬೀಜದ ಬತ್ತ ತಂದಿಟ್ಟ ರೈತರು ಮಳೆ ಮಳೆ ಎಂದು ಆಕಾಶ ನೋಡುವಂತಾಗಿದೆ. ಸಾಕಷ್ಟು ರೈತರು ತಮ್ಮ ವಿವಿಧ ಕಷ್ಟಗಳ ನಡುವೆ ಮುಂದಿನ ಬೆಳೆ ಉತ್ತಮವಾಗಿದ್ದರೆ ತಮ್ಮ ಬದುಕು , ಮಕ್ಕಳ ಶಿಕ್ಷಣ , ಮಾಡಿದ ಸಾಲ ಎಲ್ಲವೂ ಪರಿಹಾರ ಕಾಣಬಹುದು ಎಂಬ ಕನಸು ಕಟ್ಟಿಕೊಂಡಿದ್ದರು ಈಗಿನ ಪರಿಸ್ಥಿತಿಯಲ್ಲಿ ಏನೂ ಹೇಳಲೂ ಸಾಧ್ಯವಿಲ್ಲದಂತಾಗಿದೆ, ಎಂಬ ಕೊರಗು ರೈತರನ್ನು ಕಾಡುತ್ತಿದೆ. ಅಡಿಕೆ ಬೆಳೆಗಾರರು ಸಾಕಷ್ಟು ಅಡಿಕೆ ಸಸಿ, ಕಾಳು ಮೆಣಸಿನ ಬಳ್ಳಿ, ಕಾಫಿ ಸಸಿ ಗಳನ್ನು ನಾಟಿ ಮಾಡಿದ್ದರು, ಈಗಿನ ಬಿರು ಬಿಸಿಲಿಗೆ ನೆಟ್ಟ ಸಸಿಗಳು ಒಣಗುತ್ತಿವೆ, ದಿನಕ್ಕೆ ಒಂದಾದರೂ ಮಳೆ ಬೀಳ ಬೇಕಿತ್ತು ಎಂದು ತೋಟಿಗರು, ಆಕಾಶ ನೋಡುವಂತಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ ಮಳೆ ಆಶಾಧಾಯಕ ವಾಗಿತ್ತು, ಕಾಳಿ ನದಿಯ ಸುಪಾ ಜಲಾಶಯದಲ್ಲಿ ನೀರಿನ ಹರಿವು ಏರುತ್ತಾ ಸಾಗಿತ್ತು ಆದರೆ ಈ ವರ್ಷ ಸುಪಾ ಜಲಾಶಯ ದಲ್ಲಿ 525 ಮೀಟರ್ ನೀರು ಮಾತ್ರ ಇದೆ, 564 ಮೀಟರ್ ನೀರು ತುಂಬಲು ಇನ್ನೂ 39 ಮೀಟರ್ ನೀರು ಕಡಿಮೆ ಇದೆ. ಜಲಾಶಯ ತುಂಬಲು ನಿರಂತರ ವಾಗಿ ಮಳೆ ಬೀಳುತ್ತಾ 3 ಸಾವಿರ ಮಿಲಿ ಮೀಟರ್ ಮಳೆ ಜಲಾಶಯದ ಮೇಲಿನ ಭಾಗದಲ್ಲಿ ಬಿಳುತ್ತೀರಬೇಕು. ಈಗ ಮಳೆ ಇಲ್ಲದೇ ಜಲಾಶಯದಲ್ಲಿ ನಡುಗಡ್ಡೆ ಗಳೆಲ್ಲ ಕಾಣುತ್ತಿವೆ ಮತ್ತೆ ಹಳೆಯ ಪಳೆಯುಳಿಕೆ ಗಳು ಕಂಡು ಬರಬಹುದು. ಮಳೆ