ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ರಾಮನಗರ ಗ್ರಾಮ ಪಂಚಾಯಿತಿ ವತಿಯಿಂದ ರವಿವಾರದ ಸಂತೆ ಸಂದರ್ಭದಲ್ಲಿ ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ–2026) ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತದಾರರಿಗೆ ಎಸ್‌ಐಆರ್ ಪ್ರಕ್ರಿಯೆ, ನಮೂನೆಗಳ ಭರ್ತಿ ಹಾಗೂ ಸಮಯಕ್ಕೆ ಸರಿಯಾಗಿ ಸಲ್ಲಿಸುವ ಕುರಿತು ಮಾಹಿತಿ ನೀಡಿದರು. ಬಳಿಕ ಸ್ವಚ್ಛ ವಾಹಿನಿಯ ಮೂಲಕ ಗ್ರಾಮದ ಸುತ್ತ ಮುತ್ತಲು ಧ್ವನಿಸುರುಳಿ ಪ್ರಸಾರ ಮಾಡಿ ಎಸ್‌ಐಆರ್ ಕುರಿತು ವ್ಯಾಪಕ ಅರಿವು ಮೂಡಿಸಲಾಯಿತು.

 

ಜೊಯಿಡಾ ತಾಲೂಕು ತುಂಬಾ ವಿಸ್ತಾರವಾಗಿದೆ. ಆದರೆ ಅಧಿಕಾರಿಗಳ ಸರ್ವೆ ಕಾರ್ಯ ಬಿರುಸಿ ನಿಂದ ಸಾಗಿದೆ. ತಾಲೂಕಾ ಆಡಳಿತ ಪರಿಷ್ಕೃತ ಜನಗಣತಿಗಾಗಿ ಹಗಲು ಇರುಳು ರಜೆ ಎನ್ನದೇ ಕೆಲಸದಲ್ಲಿ ನಿರತವಾಗಿದೆ. ಮಳೆಗಾಲದ ಸಮಯ ಜನಗಣತಿ ಗಾಗಿ ಓಡಾಡುವವರಿಗೆ ವಿಸ್ತಾರವಾದ ತಾಲೂಕಿನಲ್ಲಿ ನಿರೀಕ್ಷಿತವಾಗಿ ಕೆಲಸ ಕಾರ್ಯಗಳು ನಡೆಯುತ್ತಿದೆ .ಅಲ್ಲದೇ ತಾ.ಪಂ.ಕಾ.ನಿ ಅಧಿಕಾರಿ ಶ್ರೀಮತಿ ಭಾರತಿ ಎನ್ ಅವರು ತಮ್ಮ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ.
ರಾಮನಗರ ಬಾಗದಲ್ಲಿ ಗ್ರಾಮಸ್ಥರಲ್ಲಿ ಸಾಕಷ್ಟು ಜನರಿಗೆ ಕನ್ನಡ ಬಾರದ ಕಾರಣ ಸ್ವಲ್ಪ ಸಮಸ್ಯೆಯಾಗಿದೆ. ಅಲ್ಲಿ ಸ್ವತಃ ತಾ ಪಂ ಕಾ ನಿ, ಅಧಿಕಾರಿಗಳಾದ ಭಾರತಿ ಎನ್ ಅವರು ರವಿವಾರದ ರಜೆಯನ್ನೂ ಲೆಕ್ಕಿಸದೆ ಮಾಹಿತಿ ನೀಡುತ್ತಿದ್ದಾರೆ. ಇದು ಜನಗಣತಿ ಕಾರ್ಯ ದಲ್ಲಿ ಭಾಗವಹಿಸಿದವರಿಗೆ ಹುರುಪು ತಂದಿದೆ.

 

ಒಟ್ಟಾರೆ ತಾಲೂಕಿನಲ್ಲಿ ಎಸ್ ಐ ಆರ್ ಜನಗಣತಿ ಕೆಲಸ ಚುರುಕಿನಿಂದ ಸಾಗಿದ್ದು ಮುಂದಿನ ವಾರದಲ್ಲಿ ಎಲ್ಲವೂ ಮುಗಿಯಲಿದೆ ವಿಸ್ತಾರವಾದ ತಾಲೂಕಿನಲ್ಲಿ ಹಳ್ಳಿಗಳಿಗೆ ರಸ್ತೆ ಸರಿ ಇಲ್ಲದ ಕಾರಣ ಮತ್ತು ಮಳೆಗಾಲದ ಕಾರಣವಾದರೂ ನಿಗದಿತ ಸಮಯ ದೊಳಗೆ ಮಾಹಿತಿ ನೀಡುವ ಕಾರ್ಯ ಮುಗಿಯಲಿದೆ ಎಂದು ತಿಳಿದು ಬಂದಿದೆ.