Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೈಕ್‌ ಚಾಲನೆ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹುಡುಗರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ವಾಹನ ನೀಡಿದ ಕಾರಣಕ್ಕಾಗಿ ಪಾಲಕರಿಗೆ ನ್ಯಾಯಾಲಯ ತಲಾ 25 ಸಾವಿರ ರೂ ದಂಡ ವಿಧಿಸಿದೆ.

ತಾಲೂಕಿನ ಕಿರವತ್ತಿಯ ಚೆಕ್‌ ಪೋಸ್ಟ್‌ ಬಳಿ ಪಿಎಸ್‌ಐಗಳಾದ ರಾಜಶೇಖರ ವಂದಲಿ ಹಾಗೂ ಸಿದ್ದಪ್ಪ ಗುಡಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹುಬ್ಬಳ್ಳಿ ಕಡೆಯಿಂದ ಅಪ್ರಾಪ್ತ ವಯಸ್ಸಿನ ಇಬ್ಬರು ಹುಡುಗರು ಬೈಕ್ ಚಲಾಯಿಸಿಕೊಂಡು ಬಂದಿದ್ದಾರೆ. ಅವರನ್ನು ತಡೆದು ಪರಿಶೀಲಿಸಿದಾಗ ಅವರು ಅಪ್ರಾಪ್ತರು ಎಂಬುದು ಪತ್ತೆಯಾಗಿದೆ. ಈ ಕುರಿತು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

Banner Ad

ಎರಡೂ ವಾಹನಗಳ ಮಾಲಕರಾದ ಕಲಘಟಗಿಯ ರಾಮಣ್ಣ ಕಲ್ಯಾಣಕರ ಹಾಗೂ ಬಾಬುರಾವ ಯಲ್ಲಾಪುರಕರ ಅವರಿಗೆ ನ್ಯಾಯಾಲಯ ತಲಾ 25 ಸಾವಿರ ರೂ. ದಂಡ ವಿಧಿಸಿದೆ.

Banner Ad