ಸುದ್ದಿ ಕನ್ನಡ ವಾರ್ತೆ

ಖ್ಯಾತ ಗಾಯಕಿ  ಡಾ.ಎಸ್ ಜಾನಕಿ ರವರು ಶನಿವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿ ರೆಳೆದಿದ್ದಾರೆ.

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ಮನೆಮನೆಗೆ ಮನೆಮನಕ್ಕೆ ತಲುಪಿದ್ದ ಅವರ ಈ ನಿಧನ ಅಪಾರ ಅಭಿಮಾನಿ ಬಳಗವನ್ನು ದುಃಖದಲ್ಲಿ ಮುಳುಗಿಸಿದೆ.

ಅಯ್ಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ ಜಾನಕಿ ರವರು 2013ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.
ತಮ್ಮ 19ನೇ ವಯಸ್ಸಿನಲ್ಲಿ ಗಾಯನವನ್ನು ಆರಂಭಿಸಿದ್ದ ಅವರು, 60 ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.

ಕನ್ನಡ, ಹಿಂದಿ ತೆಲುಗು ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಗಾನ ಕೋಗಿಲೆ ಎಸ್ ಜಾನಕಿ ಅವರು ಇಂದು ನಿಧನರಾಗಿದ್ದಾರೆ.

ಎಸ್. ಜಾನಕಿ ಅವರು 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಮೂರನೆಯ ವಯಸ್ಸಿನಲ್ಲಿ, ಪೈಡಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.

 

ಅಂತ್ಯಕ್ರಿಯೆ

ಮೈಸೂರಿ‌ನಲ್ಲೇ ಎಸ್.ಜಾನಕಿ ಅಂತ್ಯಸಂಸ್ಕಾರ.
ಕುಟುಂಬಸ್ಥರದ ಜೊತೆ ಚರ್ಚೆ ಬಳಿಕ ಉಸ್ತುವಾರಿ ಸಚಿವ ಡಾ‌ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.
ನಾಳೆ ಬೆಳಗ್ಗೆ 8 ಗಂಟೆಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ.
ಸಂಜೆ ವೇಳೆಗೆ ಮೈಸೂರು ತಾಲೂಕಿನ ಕಣಿಯನ ಹುಂಡಿ ನವೀನ್ ಫಾರಂ ಹೌಸ್ ನಲ್ಲಿ ಅಂತಿಮ ಸಂಸ್ಕಾರ.
ಎಸ್.ಜಾನಕಿ ಅವರು ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಹೇಳಿದರು.
ಅವರ ಇಚ್ಚೇಯಂತೆ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದೇವೆ‌.
ಖುದ್ದು ಸಿಎಂ ಅವರೇ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೇರವೇರಿಸಿ ಎಂದು ಹೇಳಿದ್ದಾರೆ.
ಸಿಎಂ ನಿರ್ದೇಶನದಂತೆ ಎಲ್ಲವೂ ನಡೆಯಲಿದೆ.
ಅಭಿಮಾನಿಗಳು ಯಾರು ಆಸ್ಪತ್ರೆ ಬಳಿ ಬರಬೇಡಿ.
ಬೆಳಗ್ಗೆ 8 ಗಂಟೆ ನಂತರ ಅಂತಮ ನಮನಕ್ಕೆ ವ್ಯವಸ್ಥೆ.