ಸುದ್ದಿ ಕನ್ನಡ ವಾರ್ತೆ
ಜೊಯಿಡಾ;ರವಿವಾರ ಜೊಯಿಡಾ ದಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಾಂಬಗಿ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಬೆಳಗಾವಿ ಮತ್ತು ರಾಮನಗರದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ಕುಣಗಿಣಿಯ ರಘುವೀರ ಗುರೂಜಿ ಅವರ ಮಾರ್ಗದರ್ಶನದಲ್ಲಿ ಈ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ.
ಜೊಯಿಡಾ ದ ಕುಣಬಿ ಭವನದಲ್ಲಿ ನಡೆಯುವ ಈ ಚಿಕಿತ್ಸಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ರಕ್ತದ ಒತ್ತಡ ರಕ್ತ ತಪಾಸಣೆ , ಮೂತ್ರ ಪರೀಕ್ಷೆ ಸೇರಿದಂತೆ ಉಚಿತ ತಪಾಸಣೆ ನಡೆಯಲಿದೆ.
ಡಾ. ಪ್ರಶಾಂತ್ ಪಾಟೀಲ್ ಡಾ. ಶಂಕರ ಶರತ್ ಗೌಡ ಡಾ. ಅಮೋಘ ಎಲ್ ಜಾಂಬಗಿ ತಪಾಸಣೆ ಮಾಡುವರು. ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ಈ ಶಿಬಿರ ನಡೆಯಲಿದೆ. ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಕುಣಗಣಿಯ ರಘುವೀರ ಗುರೂಜಿ ಮನವಿ ಮಾಡಿಕೊಂಡಿದ್ದಾರೆ.
