ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್ ಮ್ಯಾನ್ ಸಾಹಸ ಪಡುವ ವಿಡಿಯೋ ಕೋಣಂದೂರು ಸಮೀಪದ ಅಕ್ಲಾಪುರ ಬೆಳ್ಳಿಕೊಪ್ಪ ಹುಲಿ ಸರ ಸಮೀಪ ಸೆರೆಯಾಗಿದೆ.

ಹೌದು ತಾಲೂಕಿನ ಕೋಣಂದೂರು ಸಮೀಪದ ತ್ರಿಯಂಬಕಾಪುರ ಗ್ರಾ. ಪಂ ವ್ಯಾಪ್ತಿಯಲ್ಲಿ ಅಕ್ಲಾಪುರ ಬೆಳ್ಳಿಕೊಪ್ಪ ಹುಲಿ ಸರ ಹಾದುಹೋಗಿರುವ ಕುಂಟೆ ಹೊಳೆಯಲ್ಲಿ ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿ ತುಂಡಾದ ಹಿನ್ನೆಲೆ ಮೆಸ್ಕಾಂ ಸಿಬ್ಬಂದಿ ನೀರಿಗೆ ಜಿಗಿದು ವಿಧ್ಯುತ್ ಸಂಪರ್ಕ ಸರಿಪಡಿಸಿದ್ದಾರೆ.

ಆರಗ ಮೂಲದ ಸಂತೋಷ ಮತ್ತು ಗುಡ್ಡೆಕೊಪ್ಪದ ಅಭಿಷೇಕ್
ಎಂಬ ವ್ಯಕ್ತಿ ತನ್ನ ಜೀವದ ಹಂಗು ಲೆಕ್ಕಿಸದೆ ಈಜಿಕೊಂಡು ಹೊಗಿ ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾರೆ.

ಕೋಣಂದೂರಿನ ಸಬ್ ಡಿವಿಜನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಸಂಪರ್ಕವು ಸರಿ ಮಾಡದೆ ಇದ್ದರೆ ಕುಂಟೆ ಹೊಳೆ ಎಂಟು 10 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗುತ್ತಿತ್ತು. ಇದನ್ನು ಮನಗಂಡು ನೀರಿಗೆ ಧೂಮಕಿ ಆದರ್ಶ ಮತ್ತು ಅಭಿಷೇಕ್ ದುರಸ್ತಿ ಮಾಡಿದ್ದಾರೆ.
ಇವರ ಈ ಸಾಹಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.