ಸುದ್ದಿ ಕನ್ನಡ ವಾರ್ತೆ
ನಾವು ಜೋಯಡಾ ತಾಲೂಕಿಗೆ ವಿದ್ಯುತ್ ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಾ ಇದ್ದೇವೆ.ಗಾಳಿ ತುಂಬಾ ಇರುವುದರಿಂದ, ಮರ ಬೀಳುವ ಕಾರಣ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ವಿಳಂಬ ವಾಗುತ್ತಿದೆ. ನಿಮ್ಮ ಸಹಕಾರ ಇರಲಿ ಎಂದುಜೋಯಿಡಾ, ದಾಂಡೇಲಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ರಾದ ದೀಪಕ ನಾಯಕ ರವರು ತಾಲೂಕಿನ ಜನತೆಗೆ ಹೇಳಿದ್ದಾರೆ. ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಮತ್ತು ಕಳೆದ ನಾಲ್ಕು ದಿನಗಳಿಂದ ಬಿಸುತ್ತಿರುವ ಬಿರುಗಾಳಿಗೆ ತಾಲೂಕಿನಲ್ಲಿ ಹಲವಾರು ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ಅವ್ಯವಸ್ಥೆ ಆಗಿತ್ತು. ಇದನ್ನು ಸರಿಪಡಿಸಲು ಜೋಯಿಡಾ ಹೆಸ್ಕಾಂ ದವರು ಮತ್ತು ವಿಶೇಷ ತಂಡ ದವರು ಹಗಲಿರುಳೆನ್ನದೆ ಪ್ರಯತ್ನಿಸುತ್ತಿದ್ದರು, ಆದರೆ ಬಿರುಗಾಳಿಗೆ ಮಾಡಿದ ಕೆಲಸವೂ ಮತ್ತೆ ಮಾಡುವಂತೆ ಆಗುತ್ತಿತ್ತು ಆದರೂ ಇಲಾಖೆಯ ಪ್ರಯತ್ನಕ್ಕೆ ಇಂದು ವಿದ್ಯುತ್ ಬಂದಿದೆ, ಇದೂ ಕೂಡ ಮತ್ತೆ ಬಿರುಗಾಳಿ ಬಂದಲ್ಲಿ, ಮತ್ತೆ ಸಮಸ್ಯೆ ತರುವ ಸಾಧ್ಯತೆ ಕೂಡ ಇದೆ.ಆದರೂ ಇಲಾಖೆಯ ಪ್ರಯತ್ನಕ್ಕೆ ತಾಲೂಕಿನ ಜನತೆ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು ಸಿಬ್ಬಂದಿಗಳು, ಮತ್ತು ಕೆಲಸ ಮಾಡಿದ ಎಲ್ಲರನ್ನೂ ಅಭಿನಂದಿಸಿದ್ದಾರೆ. ಇಲಾಖೆಗೆ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿದ್ದಾರೆ
