ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಭಾರಿ ಬಿರುಗಾಳಿ ಮಳೆ ಮುಂದುವರೆದಿದೆ, ಜಿಲ್ಲಾ ಆಡಳಿತ ಸೂಕ್ತ ಸಮಯದಲ್ಲಿ ಶಾಲೆ ಗಳಿಗೆ ರಜೆ ನೀಡುವ ಮೂಲಕ ಗೌರವ ಕ್ಕೆ ಪಾತ್ರ ವಾಗಿದೆ ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಿರಂತರ ಬಿರುಗಾಳಿ ಮಳೆಗೆ ಜನಜೀವನ, ಅವ್ಯವಸ್ಥೆ ಗೆ ಒಳಗಾಗಿದೆ, ಇಂತ ಮಳೆ ಗಾಳಿಗೆ ಮಕ್ಕಳು ಶಾಲೆ ಅಂಗನವಾಡಿ ಗಳಿಗೆ ಹೋಗುವುದೇ ಕಷ್ಟಕರ ವಾಗಿತ್ತು, ಮುಂಜಾಗ್ರತೆ ಗಾಗಿ ಜಿಲ್ಲಾ ಆಡಳಿತ ಕೈಕೊಂಡ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲೂಕಿನಲ್ಲಿ ವ್ಯವಸ್ಥೆ ಸರಿಪಡಿಸಿದರೂ ಮತ್ತೆ ಮತ್ತೆ ಬಿರುಗಾಳಿ ಮಳೆಗೆ ಸುಧಾರಣೆ ದೂರವಾಗಿದೆ. ಅಲ್ಲಲ್ಲಿ ಮರಗಿಡಗಳು ಬಿದ್ದು ಸಂಚಾರ ದುಸ್ತರ ವಾಗಿ, ಸಾರಿಗೆ ಸಂಚಾರದಲ್ಲಿ ವಿಳಂಬ ವಾಗುತ್ತಿದೆ. ವಿದ್ಯುತ್, ಮತ್ತು ದೂರವಾಣಿಗಳು, ನಿದ್ರೆಗೆ ಜಾರುತ್ತಿವೆ, ಇದು ಒಂದುವಾರದಿಂದ ನಡೆದಿದೆ.
ರೈತರು ಕೆಲಸ ಕಾರ್ಯ ಗಳಿಗೆ ಹೋಗಲೂ ಕೂಡ ಬಿರುಗಾಳಿ ಮಳೆ ಆತಂಕ ತಂದಿದೆ. ಕಚೇರಿ ಕೆಲಸ ಗಳಿಗೆ ಹೋಗುವುದೋ ಬೇಡವೋ ಎಂಬ ಆತಂಕ ಕೂಡ ಅಧಿಕಾರಿಗಳನ್ನು ಕಾಡಿದೆ, ಮುಖ್ಯವಾಗಿ ವಿದ್ಯುತ್ ಇಲ್ಲದ ಕಾರಣ ಕಚೇರಿ ಯಲ್ಲೂ ಕತ್ತಲೆ ಯಲ್ಲಿ ಕುಳಿತು ಇಲ್ಲದ ಸರ್ವರ್ ಗಾಗಿ ತಡಕಾಡುವಂತಾಗಿದೆ. ಒಟ್ಟಾರೆ ಪ್ರಕೃತಿಯ ಆಟದ ಮುಂದೆ ಯಾರ ಆಟವೂ ನಡೆಯದು ಎನ್ನುವುದನ್ನು ಈ ವರ್ಷದ ಬಿರುಗಾಳಿ ಮಳೆ ತೋರಿಸಿಕೊಟ್ಟಿದೆ.
