ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ವಿದ್ಯುತ್ ಇಲ್ಲ ಕುಡಿಯಲು ನೀರಿಲ್ಲ,ನೆಟ್ವರ್ಕ್ ಇಲ್ಲ, ಎಲ್ಲ ಇಲ್ಲ ಗಳ ನಡುವೆ ಜನತೆ ಇದ್ದರೂ, ಯಾರಿಗೂ ಜನರ ಬಾವನೆ ಗಳಿಗೆ ಬೆಲೆ ಕೊಡಬೇಕು, ಎಂಬ ಕಿಂಚಿತ್ ಕಾಳಜಿಯೂ ಇಲ್ಲ ಎನ್ನುವುದಕ್ಕೆ ಇದೇ ನೋಡಿ ಉಧಾಹರಣೆ,
ವಿದ್ಯುತ್ ಇದ್ದರೆ ಮಾತ್ರ ನಡೆಯುವ ಟವರ್ ಗಳು, ನೆಟ್ವರ್ಕ್ ಇಲ್ಲದ ವೇಳೆಯಲ್ಲಿ ಜನರ ಮನೆಗೆ ಭೇಟಿ ನೀಡಿ ಓಟಿಪಿ ಕೇಳುವ ಕೆಲವು ಇಲಾಖೆ ಯವರು, ಯಾವ ತಲೆ ಬಿಸಿ ಇಲ್ಲದೇ ಪ್ರತಿವರ್ಷ ಜನರ ಕಷ್ಟ ನೋಡಿಯೂ ನೋಡದಂತಿರುವ ರಾಜಕಾರಣಿಗಳು, ಇವರುಗಳ ನಡುವೆ ಬದುಕಲು ಪ್ರಯತ್ನಿಸುವ ಜನಸಾಮಾನ್ಯರು ಗಳು, ಇದೇ ಜೋಯಿಡಾ ದ ಪ್ರಪಂಚ ಎನ್ನಲಾಗುತ್ತಿದೆ. ತಾಲೂಕಿನಲ್ಲಿ ಏನೂ ಇಲ್ಲದರ ನಡುವೆ ಬದುಕಲು ಪ್ರಯತ್ನಿಸುವವರು, ಬಹಳ ಬೇಸರ ಪಟ್ಟಿದ್ದಾರೆ, ತಮ್ಮ ಏನೋ ಸಮಸ್ಯೆಗೆ ದೂರವಾಣಿ ಮಾಡೋಣ ಎಂದರೂ ನೆಟ್ವರ್ಕ್ ಇಲ್ಲ,
ತಾಲೂಕಾ ಕೇಂದ್ರ ದಲ್ಲಿಯೇ ಈ ಸ್ಥಿತಿ ಆದರೆ ಗ್ರಾಮೀಣ ಬಾಗದಲ್ಲಿ ಗತಿಯೇನು ಎಂಬ ಮಾತುಗಳು ನಿತ್ಯ ಕೇಳಿಬರುತ್ತಿವೆ. ತಾಲೂಕಿನಲ್ಲಿ ಏನಿದೆ ಏನಿಲ್ಲ ಎಂದು ಕೇಳಿದರೆ ಒಂದೇ ಮಾತಿನಲ್ಲಿ ಏನಿಲ್ಲ ಎಂದು ಹೇಳಬಹುದು, ಇದು ನಮಗೆ ಸ್ವಾತಂತ್ರ್ಯ ಬಂದ ನಂತರ ನಮ್ಮನ್ನು ಆಳಿದವರು ಆಳುತ್ತಿರುವವರು ನೀಡಿದ ಕೊಡುಗೆ ಎಂದರೆ ತಪ್ಪಿಲ್ಲ ವೆನೋ..ಹಾಗಾಗಿ ತಾಲೂಕಿನ ಜನತೆ ಈ ಉದ್ಘೋಷ್ ಮಾಡಿದ್ದಾರೆ.
