ಸುದ್ದಿ ಕನ್ನಡ
ಜೋಯಿಡಾ : ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ರಾಜ್ಯಮಟ್ಟದ “ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ -2026” ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರದರ್ಶಿಸಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಮಾದಕ ವಸ್ತು ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜೋಯಿಡಾ ಪಿಎಸ್ಐ ಜಗದೀಶ್ ನಾಯ್ಕ ಮಾತನಾಡಿ ಈಗಿನ ಯುವ ಜನತೆ ದುಷ್ಟಟಗಳತ್ತ ವಾಲುತ್ತಿದ್ದಾರೆ, ಮೊಬೈಲ್ ,ಟಿವಿಗಳಲ್ಲಿ ವ್ಯಾಪಾರಕ್ಕೆಂದು ತೋರಿಸುವ ಮಾದಕ ವಸ್ತುಗಳು ಹಾಗೂ ಗುಟ್ಕಾ ತಂಬಾಕುಗಳನ್ನು ತಿನ್ನಲು ಕೆಲ ಜನರು ಪ್ರೇರೇಪಿಸುತ್ತಾರೆ, ಶಾಲಾ ಕಾಲೇಜು ಮಕ್ಕಳು ಇದಕ್ಕೆ ಬಲಿಯಾಗಬಾರದು, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನೀವು ಒಳ್ಳೆಯ ಗುಣಗಳನ್ನು ಕಲಿತು ಸಮಾಜಕ್ಕೆ ಮಾದರಿಯಾಗಬೇಕು, ಕಳ್ಳತನ ಹಾಗೂ ಮಾದಕ ವಸ್ತುಗಳ ಮಾರಾಟ ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದು ಮಕ್ಕಳಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಜೋಯಿಡಾ ಕ್ರೈಮ್ ಪಿಎಸ್ಐ ಮಹಾದೇವಿ ನಾಯಕವಾಡಿ ಹಾಗೂ ಸಿಬ್ಬಂದಿಗಳು ಇದ್ದರು.
