ಸುದ್ದಿ ಕನ್ನಡ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಶುರುವಾಗಿದೆ. ಹೆಗ್ಗಾರ್, ಶೇವ್ಕಾರ್, ಕೈಗಡಿ, ಭಾಗದಿಂದ ಗುಳ್ಳಾಪುರ -ಯಲ್ಲಾಪುರ ಭಾಗಕ್ಕೆ ಸಂಪರ್ಕಿಸಲು ಜನರು ಗಂಗಾವಳಿ ನದಿಯಲ್ಲಿ ಜನರು ಓಡಾಟಕ್ಕೆಂದು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಮಣ್ಣಿನ ಸೇತುವೆ ಬಹುತೇಕ ಕೊಚ್ಚಿಹೋಗಿದೆ. ಇದರಿಂದಾಗಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ.
ಸಂಪರ್ಕಕ್ಕೆಂದು ಹತ್ತಿರ ದಾರಿ ಇದಾಗಿದ್ದು, ಇದೀಗ ಈ ಮಣ್ಣಿನ ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದಾಗಿ ಆ ಭಾಗದ ಗ್ರಾಮಸ್ಥರು ಪೇಟೆ ಸಂಪರ್ಕಿಸಲು ಸುತ್ತುವರಿದು ಆಗಮಿಸುವ ಪರಿಸ್ಥಿತಿ ಎದುರಾಗಿದೆ.
ಗಂಗಾವಳಿಯ ಈ ಸೇತುವೆ ಕುಸಿದು ಬಿದ್ದು ಕೆಲ ವರ್ಷ ಕಳೆದರೂ ಇದುವರೆಗೂ ಸೇತುವೆ ನಿರ್ಮಾಣ ನಡೆದಿಲ್ಲ. ಇದರಿಂದಾಗಿ ಶೇವ್ಕಾರ್ ಹೆಗ್ಗಾರ್ ಭಾಗದ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
