ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಬಾಮಣಗಿ ಯಲ್ಲಿ ಐದು ಕಾಲಿನ ಕರು ಒಂದಕ್ಕೆ ಆಕಳು ಜನ್ಮ ನೀಡಿದೆ, ಪರಶುರಾಮ ಗೌಡ ಅವರ ಆಕಳು ಕೊಟ್ಟಿಗೆ ಯಲ್ಲಿ ಗಂಡು ಕರುವಿಗೆ ಜನ್ಮ ನೀಡಿದೆ. ಐದು ಕಾಲಿದ್ದರು ಕರುವು ಜನ್ಮ ನೀಡಲು ಯಾವುದೇ ತೊಂದರೆ ಆಗಲಿಲ್ಲ.

ತಾಲೂಕಿನಲ್ಲಿ ಹೈನುಗಾರಿಕೆ ಸಾಂಪ್ರದಾಯಕ ವಾಗಿ ನಡೆಯುತ್ತಿರುವುದೇ ಹೆಚ್ಚು, ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಪಶುವೈದ್ಯರ ಕೊರತೆ ಗಳ ನಡುವೆಯೂ ಹೈನುಗಾರಿಕೆ, ದನಗಳ ಸಾಕಾಣಿಕೆ ನಡೆದಿದೆ, ಬಾಮಣಿಗಿ ಯಲ್ಲಿ ಪರಶುರಾಮ ಅವರ ಆಕಳು ಕರುವಿಗೆ ಜನ್ಮ ನೀಡುವಾಗ ಐದು ಕಾಲಿನ ಕರುವಾದರೂ, ಸರಿಯಾಗಿಯೇ ಜನ್ಮ ನೀಡಿದೆ, ಈ ಗಂಡು ಕರುವಿನ ಆರೋಗ್ಯ ಅವಯವ ಗಳು ಸರಿಯಾಗಿದ್ದು, ಒಂದು ಕಾಲು ಮಾತ್ರ ಬೆನ್ನ ಮೇಲೆ ಮೂಡಿ ಬಂದಿದೆ, ಇದು ಅಕ್ಕ ಪಕ್ಕ ದ ಜನರಆಶ್ಚರ್ಯ ಕ್ಕೆ ಕಾರಣ ವಾಗಿದೆ. ಮಕ್ಕಳಿಗೆ ಒಂದು ವಿಶೇಷ ವಾದಂತಾಗಿದೆ.ತಾಯಿ ಆಕಳು ಮತ್ತು ಕರು ಆರೋಗ್ಯ ವಾಗಿವೆ.