ಸುದ್ದಿ ಕನ್ನಡ ವಾರ್ತೆ
ಕಾಂಗ್ರೇಸ್ಸಿಗೆ ಯಾಕೆಹೆದರಿಕೆ ಎಂಬ ಕುರಿತು ಬಿಜೆಪಿ ಯ ಜಿಲ್ಲಾ ವಕ್ತಾರ ರಾದ ಸದಾನಂದ ಭಟ್ ಅವರು ಹೇಳಿಕೆ ನೀಡಿದ್ದು, ಹೀಗಿದೆ.
ಸಂವಿಧಾನಬದ್ಧವಾಗಿ ಚುನಾವಣಾ ಆಯೋಗವು 24 ವರ್ಷಗಳ ನಂತರ ರಾಷ್ಟ್ರದಾದ್ಯಂತ ಅರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ದೃಷ್ಟಿಯಿಂದ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ಜನರಲ್ಲಿ ಎಸ್ಐಆರ್ ಕುರಿತು ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಾ ಕಾಂಗ್ರೆಸ್ ನಾಯಕರುಗಳು ಬಿಜೆಪಿಯ ಮೇಲೆ ವ್ರತಾ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಎಸ್ಐಆರ್ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದೆ. ಹೀಗಿರುವಲ್ಲಿ ಕಾಂಗ್ರೆಸ ಮಾಜಿ ಸಚಿವರು ಶಾಸಕ ಮಂಕಾಳ ವೈದ್ಯರು ಎಸ್ಐಆರ್ ಅನ್ನು ಬಳಸಿ, ಬಿಜೆಪಿ ಜನರಿಗೆ ತೊಂದರೆ ಮಾಡುತ್ತಿದೆ ಎಂದು ಹೇಳಿರುವುದು ಸರಿಯಲ್ಲ. ಹಾಗೆಯೇ ಶಾಸಕರಾದ ಭೀಮಣ್ಣ ನಾಯಕರವರು ಎಸ್.ಐಆರ್ ಮುಖಾಂತರ ಬಿಜೆಪಿ ಮತದಾರರನ್ನು ಪಟ್ಟಿಯಿಂದ ಹೊರಗೆ ಇಡುವ ಕೆಲಸ ಮಾಡುತ್ತಿದೆ ಎಂದಿರುವುದು ಕಾಂಗ್ರೆಸ್ ನವರಿಗೆ ಎಸ್ಐಆರ್ ಕುರಿತು ಇರುವ ಜ್ಞಾನವನ್ನು ಪ್ರದರ್ಶಿಸುತ್ತದೆ. ಹಾಗೆಯೆ ಕಾಂಗ್ರೆಸ್ ಜಿಲ್ಲಾ ವಕ್ತಾರರು ಎಸ್ಐಆರ್ ಮುಖಾಂತರ ಮತದಾರ ಪಟ್ಟಿಯನ್ನು ಪರಿಷ್ಕರಿಸಿ ನಂತರ ಮತದಾರರಲ್ಲದವರ ಪಡಿತರ ಚೀಟಿಯನ್ನು ರದ್ದುಗೊಳಿಸುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮತದಾರ ಪಟ್ಟಿಯ ಪರಿಷ್ಕರಣೆಯನ್ನು ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತದೆ ಮತ್ತು ಅರ್ಹರಾದ ಯಾವುದೇ ಮತದಾರರನ್ನು ಹೊರಗಿಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಲಿ.ಇದು ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ದ ಜನರನ್ನು ಎತ್ತಿ ಕಟ್ಟುವ ಹುನ್ನಾರ.ಹಾಗೆಯೇ ಪಡಿತರ ಚೀಟಿಯನ್ನು ಯಾರಿಗೆ ನೀಡಬೇಕು ಮತ್ತು ವಿತರಿಸುವ ಕೆಲಸ ರಾಜ್ಯ ಸರ್ಕಾರದ್ದು ಎಂಬುದನ್ನು ಗಮನಿಸಲಿ.
ರಾಜ್ಯದಲ್ಲಿ ಕೆಲವು ಪ್ರದೇಶದಲ್ಲಿ ಬರ ಇನ್ನು ಕೆಲವೆಡೆ ಅತಿವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸದೆ ಕಾಂಗ್ರೆಸ್ ಸರಕಾರ ಕೇವಲ ಆರ್ ಎಸ್ ಎಸ್ ಮತ್ತು ಬಿಜೆಪಿಯ ಮೇಲೆ ವಿನಾಕಾರಣ ಆಪಾದನೆಗಳನ್ನು ಮಾಡುತ್ತಾ ಆಡಳಿತ ನಿರ್ವಹಣೆಗೆ ಮಂತ್ರಿಮಂಡಳ ವಿಸ್ತರಣೆ ಮಾಡಲಾಗದೆ ಕೇವಲ ರಾಜಕೀಯ ಮೇಲಾಟ ನಡೆಸುತ್ತಿರುವುದು ಜನರ ಗಮನದಲ್ಲಿದೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಎಲ್ಲರಿಗೂ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದ ಕಾಂಗ್ರೆಸ್ ಈಗ ಗ್ಯಾರಂಟಿಗಳನ್ನು ಪರಿಷ್ಕರಿಸುತ್ತೇವೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಹೇಳುತ್ತಿರುವುದು ಏಕೆ ?ಗೃಹಲಕ್ಷ್ಮಿ ಯೋಜನೆಯಲ್ಲಿ ನೀಡಬೇಕಾದ ಹಣವನ್ನು ನೀಡದೆ ನಿರ್ದಿಷ್ಟವಿಲ್ಲದ ಖಾತೆಗಳಿಗೆ ಹಣ ಹಾಕಿರುವುದು ಕರ್ನಾಟಕ ರಾಜ್ಯ ಇತಿಹಾಸದಲ್ಲಿಯೇ ಒಂದು ದೊಡ್ಡ ಹಗರಣ ನಡೆದಿರುವಂತೆ ಭಾಸವಾಗುತ್ತಿದೆ. ನಿಗದಿತವಾಗಿ ಹಿರಿಯ ನಾಗರಿಕರು, ಅಂಗವಿಕಲರಿಗೆ ಪಿಂಚಣಿಗಳನ್ನು ನೀಡದೆ, ಅನ್ನಭಾಗ್ಯದ ಅಕ್ಕಿಯನ್ನು ಸರಿಯಾಗಿ ವಿತರಿಸದೆ ರಾಜ್ಯದ ಜನರಿಗೆ ಸತತವಾಗಿ ಬೆಲೆ ಏರಿಕೆಯ ಭಾಗ್ಯವನ್ನು ನೀಡುತ್ತಿರುವ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಗೆ ಚಿಂತಿಸಲಿ.
ಕಾಂಗ್ರೆಸ್ ಶಾಸಕರುಗಳು ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯುವ ಆಸೆಯಿಂದ ವಿನಾಕಾರಣ ಬಿಜೆಪಿಯ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಲಿ.
–ಸದಾನಂದ ಭಟ್
ಬಿಜೆಪಿ ಜಿಲ್ಲಾ ವಕ್ತಾರರು
ಉತ್ತರ ಕನ್ನಡ
