ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಶೋದಾ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೈನಿಂಗ್ ಆಫ್ ಫ್ಯಾಶನ್ ಬ್ಲೌಸ್ ಟ್ರೈನಿಂಗ್ ತರಬೇತಿಯನ್ನು ಉಳವಿ ಗ್ರಾಮ ಪಂಚಾಯತಿಯ ಕಡಗರ್ಣಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು .

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮಂಜುನಾಥ್ ಮುಕಾಶಿ ನಿಕಟ ಪೂರ್ವ ಗ್ರಾಮ ಪಂಚಾಯತಿ ಅಧ್ಯಕ್ಷರು ಉಳವಿ ಇವರು ಬಂದು ಉದ್ಘಾಟಿಸಿ ಟೈಲರಿಂಗ್ ತರಬೇತಿ ಎನ್ನುವುದು ಹೆಣ್ಣು ಮಕ್ಕಳಿಗೆ ಒಳ್ಳೆಯ ಉದ್ಯೋಗ ಅದರಲ್ಲಿ ಬ್ಲೌಸ್ ಡಿಸೈನ್ ತರಬೇತಿ ಬಹಳಷ್ಟು ಮುಖ್ಯ ತರಬೇತಿಯಾಗಿದೆ ಯಾಕೆಂದರೆ ಮದುವೆಯ ಸಂದರ್ಭದಲ್ಲಿ ಹೆಣ್ಣು ಮಗು ತನ್ನ ಬ್ಲೌಸ್ ಅನ್ನು ವಿವಿಧ ರೀತಿಯ ವಿನ್ಯಾಸ ಮುಖಾಂತರ ಬಟ್ಟೆಯಿಂದ ಹೊಲೆದುಕೊಳ್ಳುತ್ತಾರೆ ಅವುಗಳ ರೇಟು ಕೂಡ ಆಯಾ ಡಿಸೈನಿಗೆ ಸಂಬಂಧಿಸಿದ ಹಾಗೆ ಇರುತ್ತದೆ ಈ ಉದ್ಯೋಗದಿಂದ ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಮಾತನಾಡಿದರು.

ವೇದಿಕೆ ಮೇಲೆ ಊರಿನ ಹಿರಿಯ ನಾಗರಿಕರು ಗುರು ಗಾಳಕರ್, ಶಿವ ಗಾಳಕರ್, ಓಂಕಾರ್, ರಂಜಿನಾ ದೇವಳಿ ಜಲ್ಮೇಶ್ವರ ಸಂಘದ ಅಧ್ಯಕ್ಷರು ಶ್ವೇತಾ ಗಾಳಕರ್ ಮತ್ತು ಲಲಿತಾ ದಾತೋಡ್ಕರ್ ಮಾಜಿ ಗ್ರಾಮ್ ಪಂಚಾಯತಿ ಉಪಾಧ್ಯಕ್ಷರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಜೋಯಿಡಾ ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ 27 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.