ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಹೊಸದಾಗಿ ಜೊಯಿಡಾ ಪೊಲೀಸ್ ಠಾಣೆಗೆ ನೇಮಕಗೊಂಡಿರುವ ಪೊಲೀಸ್ ಉಪನಿರೀಕ್ಷಕರಿಗೆ (PSI) ತಾಲೂಕು ಕುಣಬಿ ಸಮಾಜದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕುಣಬಿ ಸಮಾಜದ ಮುಖಂಡರು ಮಾತನಾಡಿ, ಜೋಯಿಡಾ ತಾಲೂಕಿನ ಬಹುಸಂಖ್ಯಾತ ಜನರು ಕುಣಬಿ ಸಮುದಾಯಕ್ಕೆ ಸೇರಿದವರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅನೇಕ ಜನರಿಗೆ ಕಾನೂನು ಹಾಗೂ ಪೊಲೀಸ್‌ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಅಲ್ಲದೇ, ಪೊಲೀಸ್‌ ಠಾಣೆಗೆ ತೆರಳುವ ವಿಚಾರದಲ್ಲಿಯೂ ಹಲವರಿಗೆ ಆತಂಕ ಮತ್ತು ಹೆದರಿಕೆ ಇರುವುದರಿಂದ ಸಮಾಜದ ಜನರಿಗೆ ಅಗತ್ಯ ಸಹಕಾರ ಹಾಗೂ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ನೂತನ PSI ಅವರು, “ಯಾವುದೇ ಸಮಸ್ಯೆ ಅಥವಾ ತೊಂದರೆಗಳಿದ್ದರೂ ಸಾರ್ವಜನಿಕರು ಮುಕ್ತವಾಗಿ ನನ್ನನ್ನು ಸಂಪರ್ಕಿಸಬಹುದು.

ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯಸಮ್ಮತ ಸೇವೆ ಒದಗಿಸುವುದು ನಮ್ಮ ಕರ್ತವ್ಯ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ, ಕಾರ್ಯದರ್ಶಿ ದಯಾನಂದ ಖುಮಗಾಳಕರ, ಮಾಜಿ ಅಧ್ಯಕ್ಷ ಅಜಿತ ಮಿರಾಶಿ, ಉಪಾಧ್ಯಕ್ಷ ಕೃಷ್ಣ ಮಿರಾಶಿ,ಮಾಳು ಸೋಲೇಕ‌ರ, ಸುಷ್ಮಾ ಮಿರಾಶಿ, ಬಾಲಚಂದ್ರ ಮಿರಾಶಿ, ವಾಮನ ಮಿರಾಶಿ, ಕೃಷ್ಣಾ ರೇವಣಕ‌ರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.