ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಮೊರಾರ್ಜಿ ವಸತಿ ಶಾಲೆಗಳಲ್ಲಿ ಹೊರ ಜಿಲ್ಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗದೆ ಅವರಲ್ಲಿ ಕೆಲವರು ಹೊರ ತಾಲೂಕುಗಳಿಗೆ ಹೋಗುತ್ತಿದ್ದಾರೆ. ಇದಕ್ಕೆಲ್ಲ ಶಿಕ್ಷಣ ಇಲಾಖೆಯ ನಿಷ್ಕಾಳಜಿ ಕಾರಣವೇ? ಎಂಬ ಪ್ರಶ್ನೆ ತಾಲೂಕಿನ ಪಾಲಕರನ್ನು ಕಾಡುತ್ತಿದೆ.

ಜಿಲ್ಲೆಗೆ ಇರುವ ಒಂದು ನವೋದಯ ಶಾಲೆಗೆ ಹೋಗಬೇಕಾದರೆ, ತಾಲೂಕಿನ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಬೇಕಾಗುತ್ತದೆ. ಮೊರಾರ್ಜಿ ಶಾಲೆಗಳಿಗೆ ಹೊರ ಜಿಲ್ಲೆಯ ವಿದ್ಯಾರ್ಥಿಗಳನ್ನು ತಂದು ಸೇರಿಸಿದರೆ, ಅವರು ಮೊದಲನೆಯ ವರ್ಷ ಶಾಲೆಗೆ ಬರುವುದೇ ಅಪರೂಪ ಊರಲ್ಲೇ ಇದ್ದು ನವೋದಯ ಶಾಲೆಗೆ ಬೇಕಾದ ತರಬೇತಿಯನ್ನು ಪಡೆಯುವ ಕೋಚಿಂಗ್ ಸೆಂಟರ್ ಗೆ ಸೇರುತ್ತಾರೆ . ಪರಿಚಯಸ್ಥ ಅಧಿಕಾರಿಗಳ ಸಹಕಾರದಿಂದ ಹೊರ ಜಿಲ್ಲೆಯ ಶಿಕ್ಷಕರ ನೆರವಿನಿಂದ ಸಂಬಂಧಿಯಂತೆ ತೋರಿಸಿ ಇಲ್ಲಿ ಸೀಟು ಪಡೆಯುತ್ತಾರೆ ಹಾಗೆ ಸೇರಿಕೊಂಡು ತಾಲೂಕಿನ ವಿದ್ಯಾರ್ಥಿಗಳಿಗೆ ಇರುವ ಅವಕಾಶವನ್ನು ಕಸಿದುಕೊಳ್ಳುತ್ತಾರೆ. ತಾಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆ ಇದ್ದರೂ ತಾಲೂಕಿಗೆ , ವಿದ್ಯಾರ್ಥಿ ಗಳಿಗೆ ಏನು ಪ್ರಯೋಜನ ವಾಗುತ್ತಿಲ್ಲ.ಈಗಾಗಲೇ ಹಲವಾರು ವಿದ್ಯಾರ್ಥಿಗಳು ಕಾರವಾರ, ಅಸ್ನೋಟಿ ಕಡವಾಡ ಹೀಗೆ ವಿವಿಧ ಸ್ಥಳಗಳಿಗೆ. ಹೋಗುತ್ತಿದ್ದಾರೆ ಇದು ತಪ್ಪ ಬೇಕಾದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಸಿಗಬೇಕು, ಹೊರಜಿಲ್ಲೆಯ ವಿದ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೊರಾರ್ಜಿ ವಸತಿ ಶಾಲೆ ಯಲ್ಲಿ ಇದ್ದರೆ ನವೋದಯಕ್ಕೆ ತಾಲೂಕಿನ ವಿದ್ಯಾರ್ಥಿಗಳ ಬದಲಿಗೆ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಆಯ್ಕೆಯಾಗಿ ಅಲ್ಲಿನ ಲಾಭ ತಾಲೂಕಿಗೆ ಸಿಗದಂತಾಗುತ್ತದೆ. ಇದಕ್ಕೆಲ್ಲ ಒಂದು ವ್ಯವಸ್ಥಿತ ತಂಡ ಇದೆ ಎಂಬ ಅನುಮಾನ ಮಕ್ಕಳ ಪಾಲಕರನ್ನು ಕಾಡುತ್ತಿದೆ. ಅದಕ್ಕಾಗಿ ತಾಲೂಕಾ ಆಡಳಿತ , ತಾಲೂಕಾ ದಂಡಾಧಿಕಾರಿ ಗಳು ಮತ್ತು ಶಿಕ್ಷಣ ಇಲಾಖೆ ಸಮಗ್ರವಾಗಿ ಪರಿಶೀಲಿಸಿಯೇ ಅಂತಿಮ ಕ್ರಮ ಜರುಗಿಸಬೇಕು. ತಾಲೂಕಿನ ವಿದ್ಯಾರ್ಥಿಗಳಿಗೆ ಮತ್ತು ತಾಲೂಕಿಗೆ ಆಗುವ ತೊಂದರೆ ನಿವಾರಿಸಬೇಕು ಎಂದು ಪಾಲಕರ ವರ್ಗದವರು ಆಗ್ರಹಿಸಿದ್ದಾರೆ. ಪಟ್ಟಣಗಳಲ್ಲಿ ಇರುವವರು ನೌಕರಿಯ ಆಸೆಗೆ ಮಕ್ಕಳನ್ನು ಮೊರಾರ್ಜಿ ಶಾಲೆಗೆ ತಮ್ಮವರ ನೆರವಿನಿಂದ ಕಳುಹಿಸಿ ಗ್ರಾಮೀಣ ವಿದ್ಯಾರ್ಥಿಗಳ ಅವಕಾಶ ಕಸಿದುಕೊಳ್ಳುವುದು ತರವಲ್ಲ . ಈ ಬಗ್ಗೆ ಶಿಕ್ಷಣ ಇಲಾಖೆ ಸರಿಯಾದ ಕ್ರಮ ಕೈಕೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.ಮೊರಾರ್ಜಿ ಶಾಲೆಯ ಬಗ್ಗೆ ಇರುವ ಮಾಹಿತಿ ಅದರ ಉಪಯೋಗ ವನ್ನು ತಾಲೂಕಿನ ಬಾಲಕರ ಪಾಲಕರಿಗೆ ತಿಳಿಸಿ ಜಾಗೃತಿ ಮೂಡಿಸಲು ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ 171 ಪ್ರಾಥಮಿಕ ಶಾಲೆ ಗಳಿದ್ದುಮೊರಾರ್ಜಿ ಯಲ್ಲಿ 6ನೇ ತರಗತಿ ಗೆ ವಿದ್ಯಾರ್ಥಿಗಳನೋಂದಣಿ ಪ್ರಕ್ರಿಯೆ ಸದ್ಯ ಆರಂಭ ವಾಗಲಿದೆ ಜೊತೆಯಲ್ಲಿ ಪ್ರಾಥಮಿಕ ಶಾಲೆ ಗಳಲ್ಲಿ ಕೂಡ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಯಾಗುತ್ತಿದೆ. ಕಾರಣ ಅಂದ್ರೆ ಗ್ರಾಮೀಣ ಶಾಲೆ ಗಳಿಗೆ ಶಿಕ್ಷಕರ ಕೊರತೆ,ಎರಡು ಮೂರು ಶಾಲೆಗಳಿಗೆ ಒಬ್ಬ ಶಿಕ್ಷಕರು ಕೆಲಸ ಮಾಡಬೇಕು ಸರಕಾರ ಕೊಟ್ಟಾಗ ಗೌರವ ಶಿಕ್ಸಕರು ಬರುತ್ತಾರೆ ಅದೂ ಕೂಡ, ಸ್ಥಳೀಯರಿದ್ದರೆ ತರಬೇತಿ ಇಲ್ಲದೆಯೂ, ಕಾಟಾ ಚಾರಕ್ಕೆ ಇಲಾಖೆ ಶಿಕ್ಷಕರ ನೇಮಕ ಮಾಡುತ್ತಿದೆ ಇದು ಪಾಲಕರಿಗೆ ನುಂಗಲಾರದ ತುತ್ತಾಗಿದೆ, ಇದರಿಂದಾಗಿ ಪ್ರಾಥಮಿಕ ಶಿಕ್ಷಣ ಅಧೋಗತಿ ತಲುಪಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳನ್ನು ಪರಊರಿಗೆ ಕಳಿಸಲು ಕಾರಣ ಎನ್ನಲಾಗಿದೆ, ಜನರಿಗೆ ಉತ್ತಮ ಶಿಕ್ಷಣ ಕೊಡುವುದು ಸರಕಾರದ ಕೆಲಸ ಅದಕ್ಕೆ ಅರಣ್ಯ ಇಲಾಖೆ ಕೂಡ ಸಹಕಾರ ನೀಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯತಕ್ಕೆ ಒಂದು ಮಾದರಿ ಶಾಲೆ ನಿರ್ಮಿಸಿ ಸಕಲ ಸೌಲಭ್ಯ ವಸತಿ ಯೊಂದಿಗೆ ಗುಣ ಮಟ್ಟದ ಶಿಕ್ಷಣ ನೀಡಿದಾಗ ಮಾತ್ರ, ಕನ್ನಡದ ಉಳಿವು ಆಗಲು ಸಾಧ್ಯ, ಎಲ್ಲ ಕೊರತೆ ಗಳೇ ಇಂದಿನ ಶಿಕ್ಷಣದ ಈ ಸ್ಥಿತಿಗೆ ಕಾರಣ ಎಂಬ ಮಾತುಗಳು ಕೇಳಿಬಂದಿದೆ.