ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ತಾಲೂಕಿನ ಬೆಡಸಗಾಂವ್ ಹೊಸ್ತೋಟ ನಿವಾಸಿ ಡಾ. ರಶ್ಮಿ ಭಟ್ಟ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದಲ್ಲಿ ಫಿಸಿಯೋಥೆರಪಿ ಪದವಿ ಪೂರ್ಣಗೊಳಿಸಿ, ತಮ್ಮ ಅಮೋಘ ಸಾಧನೆಗಾಗಿ ಆರು ಚಿನ್ನದ ಪದಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ನಾಲ್ಕು ವರ್ಷಗಳ ಅಧ್ಯಯನ ಅವಧಿಯಲ್ಲಿ ಪ್ರತಿವರ್ಷವೂ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೇ, ಬೆಸ್ಟ್ ಮೆರಿಟೋರಿಯಸ್ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಪ್ರಶಸ್ತಿಯ ಚಿನ್ನದ ಪದಕ ಹಾಗೂ ಸುಪ್ರಿಯಾ ಮತ್ತು ಡಿ. ಹರ್ಷೇಂದ್ರ ಕುಮಾರ್ ಸ್ಥಾಪಿತ ಬೆಸ್ಟ್ ಔಟ್ಗೋಯಿಂಗ್ ಸ್ಟುಡೆಂಟ್ ಆಫ್ ಫಿಸಿಯೋಥೆರಪಿ ಚಿನ್ನದ ಪದಕವೂ ಅವರಿಗೆ ಲಭಿಸಿದೆ.
ಇತ್ತೀಚೆಗೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳು ಹಾಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇವರು ಗಣೇಶ ಭಟ್ಟ ಹಾಗೂ ಶೋಭಾ ಭಟ್ಟ ದಂಪತಿ ಪುತ್ರಿ.
