ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ, ಕಳಚೆ ಇವರಿಂದ ಜೋಯಿಡಾ ದಲ್ಲಿ ಮೊಟ್ಟ ಮೊದಲಿಗೆ
ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

ಸ್ಥಳ: ಸಹ್ಯಾದ್ರಿ ವಿ. ಪ್ರಾ. ಗ್ರಾ. ಕೃ. ಸ. ಸ. ನಿ. ವ್ಯಾಪಾರಿ ಕೇಂದ್ರ ಜೋಯಿಡಾ
10/06/2026ಬುಧವಾರ ಸಮಯ: ಬೆಳಗ್ಗೆ 10.30. ಘಂಟೆಗೆ

ಅಡಿಕೆ ಬೆಳೆಗಾರರಿಗಾಗಿ ವಿಶೇಷ ಮಾಹಿತಿ ಮತ್ತು ತರಬೇತಿ ಈ ಕಾರ್ಯಕ್ರಮದ ಉದ್ದೇಶ

ಅಡಿಕೆ ಬೆಳೆಗಾರರಿಗೆ ಆಧುನಿಕ ಕೃಷಿ ಪದ್ಧತಿಗಳು, ರೋಗ ಮತ್ತು ಕೀಟ ನಿರ್ವಹಣೆ, ಪೋಷಕಾಂಶ ನಿರ್ವಹಣೆ ಹಾಗೂ ಮಾರುಕಟ್ಟೆ ಮಾಹಿತಿ ಯನ್ನು ನೀಡುವ ಮೂಲಕ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುವುದು ತರಬೇತಿಯಲ್ಲಿ ಒಳಗೊಂಡಿರುವ ವಿಷಯಗಳು
ಅಡಿಕೆ ತೋಟದ ಸಮರ್ಪಕ ನಿರ್ವಹಣೆ
ಉತ್ತಮ ತಳಿಗಳ ಆಯ್ಕೆ ಮತ್ತು ನೆಡುವ ವಿಧಾನ
ಗೊಬ್ಬರ ಮತ್ತು ಪೋಷಕಾಂಶಗಳ ಸಮತೋಲನ ಬಳಕೆ
ಕೀಟ ಹಾಗೂ ರೋಗಗಳ ಗುರುತಿಸುವಿಕೆ ಮತ್ತು ನಿಯಂತ್ರಣ
ನೀರಾವರಿ ಮತ್ತು ಮಣ್ಣಿನ ಸಂರಕ್ಷಣೆ
ಕೊಯ್ದು ನಂತರದ ಸಂಸ್ಕರಣೆ ಮತ್ತು ಗುಣಮಟ್ಟ ಕಾಪಾಡುವಿಕೆ
ಮಾರುಕಟ್ಟೆ ಮಾಹಿತಿ ಹಾಗೂ ಬೆಲೆ ನಿರ್ವಹಣೆ
ತರಬೇತಿಯಿಂದಾಗುವ ಪ್ರಯೋಜನಗಳು
ಉತ್ತಮ ಗುಣಮಟ್ಟದ ಅಡಿಕೆ ಉತ್ಪಾದನೆ
ಉತ್ಪಾದನಾ ವೆಚ್ಚ ಕಡಿತ
ಕೀಟ ಮತ್ತು ರೋಗಗಳಿಂದಾಗುವ ನಷ್ಟ ತಡೆ
ರೈತರಿಗೆ ಸಂದೇಶ :-
ಸರಿಯಾದ ಮಾಹಿತಿ ಮತ್ತು ವೈಜ್ಞಾನಿಕ ತರಬೇತಿ ಅಡಿಕೆ ಕೃಷಿಯ ಯಶಸ್ಸಿನ ಗುಟ್ಟು.”
ಸರ್ವರಿಗೂ ಹಾರ್ದಿಕ ಸ್ವಾಗತ ಬನ್ನಿ ಭಾಗವಹಿಸಿ