ಸುದ್ದಿ ಕನ್ನಡ ವಾರ್ತೆ

ಇಂದು ಕ್ಯಾಸಲರಾಕ್ ರೈಲ್ವೆ ಹೈಸ್ಕೂಲಿನಲ್ಲಿ ಹತ್ತನೇ ತರಗತಿಯಲ್ಲಿ ತಾಲೂಕಿಗೆ ಪ್ರಥಮ ಬಂದ ವಿದ್ಯಾರ್ಥಿನಿ ಕುಮಾರಿ ನಿಧಿ ಶಾಂತಾರಾಮ ಮಹೇಕರ ಇವಳಿಗೆ ಜೋಯಿಡಾ ತಾಲೂಕು ಮಾಜಿ ಸೈನಿಕರಿಂದ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ ಮಾತನಾಡಿ ನಿಧಿ ಇವಳ ಸಾಧನೆ ಶಾಲೆಗೆ ಮತ್ತು ಊರಿಗೆ ಮಾದರಿ, ಇಂಗ್ಲಿಷ್ ಮಾಧ್ಯಮದಲ್ಲಿ 98% ಮಾಡುದು ಬಹಳ ಕಷ್ಟ ಇದಕ್ಕೆ ಅವಳ ಪಾಲಕರ ಶಿಕ್ಷಕರ ಶಿಕ್ಷಕರ ಪರಿಶ್ರಮ ಕೂಡ ಇದೆ . ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ದೇಶ ಭಕ್ತಿ ಕೂಡ ಇರಬೇಕು ಎಂದು ಹೇಳಿದರು ಮತ್ತೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿದರು.

ಈ ಸಂಧರ್ಭದಲ್ಲಿ ಶಾಲಾ ಪ್ರಾಂಶುಪಾಲರು, ಮಾಜಿ ಸೈನಿಕರು ಸಂಜಯ ನೈಕ,ನಂದಾ ಜಾಧವ,ಗಜಾನನ ನೈಕ,ರತ್ನಾಕರ ಗಾವಡಾ ಸಾಗರ ದೇಸಾಯಿ ಅನಿಲ ಮೆಂಡೋಲಕರ ನರೇಂದ್ರ ನೈಕ,ವಿಜಯ ಗಾವಡಾ,ಗೋವಿಂದ ಶೇಟ, ಗಣಪತಿ ದೇಸಾಯಿ,ದೀಪಕ ನೈಕ ಮುಂತಾದವರು ಉಪಸ್ಥಿತರಿದ್ದರು.