ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ,
ತಾಲೂಕಿನ ಮಾವಿನಗುಂಡಿ ಶಾಖೆಯ ಹಲಗೇರಿ ಸಮೀಪ ಕಡವೆ ಮತ್ತು ಬರ್ಕ ಪ್ರಾಣಿಯನ್ನು ಬೇಟೆಯಾಡಿ ವಾಹನದಲ್ಲಿ ಸಾಗಾಣೆ ಮಾಡುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಶುಕ್ರವಾರ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಹುಸೂರು ಗ್ರಾಮದ ಸಮೀಪದ ಕಚ್ಚಾರಸ್ತೆಯಲ್ಲಿ ಮೃತಪಟ್ಟ ಹೆಣ್ಣು ಕಡವೆ, ಒಂದು ಮೃತಪಟ್ಟ ಗಂಡು ಬರ್ಕವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಖಾತ್ರಿಪಡಿಸಿಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿತರಾದ ವಿರೇಂದ್ರ ಮಾರುತಿ ನಾಯ್ಕ ಹುಸೂರು, ಶಿವಾನಂದ ಮಹಾಬಲೇಶ್ವರ ನಾಯ್ಕ ಕುಂಬಾರಕುಳಿ, ವಾಸುದೇವ ಈರ ನಾಯ್ಕ ಸುಂಕತ್ತಿ ಇವರನ್ನು ಮತ್ತು ಸಾಗಣೆಗೆ ಬಳಸುತ್ತಿದ್ದ ವಾಹನ, ಬೇಟೆಯಾಡಲು ಬಳಸಿದ ಬಂದೂಕನ್ನು ಪಶಪಡಿಸಿಕೊಂಂಡು ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ದಾಂಡೇಲಿಯ ವನ್ಯಜೀವಿ ವಿಧಿವಿಜ್ಞಾನ ತಜ್ಞ ಮಧುಸೂದನ. ಎಸ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಯು. ಜೆ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಂ. ಎಸ್, ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಆರ್.ಡಿ,ಗುಲಶೀರ್ ಎಂ, ಗುಡದಯ್ಯ ಅಪ್ಪಿನಬೈಲ್, ಅಡಿವೆಪ್ಪ ಸಂಗಪಗಪಕನ್ನೂರು, ವನಪಾಲಕರಾದ ಹನುಂತಪ್ಪ ಬಿ. ಕಿಲಾರಿ, ಮಾರುತಿ ನಾಯ್ಕ, ನೀಲಗಿರಿ ಶಿವಬಸಣ್ಣನವರ,ಅಶೋಕ ಎಲ್.ಬಿ,ವೆಂಕಟೇಶ ಪೇಟಿಮಠ ಹಾಗೂ ವಾಹನ ಚಾಲಕರಾದ ಗಣಪತಿ ಹಾಗೂ ಶೇಖರ್ ಭಾಗವಹಿಸಿದ್ದರು.