ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಈ ಕೆಳಕಂಡ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸೋಮವಾರ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಹೆಸ್ಕಾಂ ವಿದ್ಯುತ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಲೂಕಿನ ಶ್ರೀ ರಾಮ ಪ್ರೌಢ ಶಾಲೆಯ ಆವಾರ ದಲ್ಲಿ ಇರುವ ಆತಂಕಕಾರಿ ಮರಗಳನ್ನು ತೆರವು ಗೊಳಿಸುವದು ಮತ್ತು 33/11ಈ ಲೈನ್ ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಸೋಮವಾರ ತಾಲೂಕಿನ ಜೋಯಿಡಾ, ನಾಗೋಡಾ ಮತ್ತು ನಂದಿಗದ್ದಾ ಗ್ರಾಮ ಪಂಚಾಯತ ಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಘಂಟೆಯಿಂದ ಸಾಯಂಕಾಲ 07 ಘಂಟೆಯ ವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ. ಕೆಲಸ ಮೊದಲೇ ಮುಗಿದರೆ ಆ ಕ್ಸಣ ವಿದ್ಯುತ್ ಪೂರೈಕೆ ಕೂಡ ನೀಡಲಾಗುವುದು ಎಂದು ಹೆಸ್ಕಾಂ ಪ್ರಕಟಿಸಿದೆ,..

ಹಾಗಾಗಿ ಜೋಯಿಡಾ, ನಾಗೋಡಾ, ಮತ್ತು ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗರು, ಗ್ರಾಮಸ್ಥರು, ವಿದ್ಯುತ್ ಇಲಾಖೆಗೆ ಸಹಕಾರ ನೀಡಬೇಕಾಗಿದೆ, ಇಲ್ಲಿನ ವಿದ್ಯುತ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವುದು, ಎಲ್ಲರಿಗೂ ತಿಳಿದಿದೆ. ಬರುವ ಮಳೆಗಾಲದ ಪೂರ್ವ ಈ ಕೆಲಸ ನಡೆಯುತ್ತಿರುವ ಕಾರಣ ಎಲ್ಲರ ಸಹಕಾರ ವನ್ನು ಇಲಾಖೆ ಬಯಸಿದೆ,