ಸುದ್ದಿ ಕನ್ನಡ ವಾರ್ತೆ
ಬಿಜೆಪಿ ಪಕ್ಷದ ಮತ್ತು ಸಂಸದ ಕಾಗೇರಿ ಅವರ ಪ್ರಯತ್ನದ ಫಲ , ಅಂತೂ ಮಳೆ ಮಾಪನ ಯಂತ್ರಗಳ ನಿರ್ವಹಣೆಗೆ ಆದೇಶ ಬಂದಿದೆ .ಎಂದು ಬಿಜೆಪಿ ಯ ಮಾಧ್ಯಮ ವಕ್ತಾರ ಸದಾನಂದ ಭಟ್ ಹೇಳಿದ್ದಾರೆ.
ಮಳೆ ಮಾಪನ ಯಂತ್ರಗಳು ನಿರ್ವಹಣೆ ಇಲ್ಲದೆ ಕಳೆದ ಮೂರು ವರ್ಷಗಳಿಂದ
ದುಸ್ಥಿತಿಯಲ್ಲಿದ್ದು ಹವಾಮಾನ ಆಧಾರಿತ ವಿಮಾ ಪರಿಹಾರ ವಿತರಣೆಗೆ ಅಡಚಣೆಯಾಗಿದ್ದ ಅಂಶಗಳ ಕುರಿತು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮತ್ತು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ರೈತರ ಪರವಾದ ಹೋರಾಟಗಳ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡ ತಂದಿರುವುದರ ಪರಿಣಾಮವಾಗಿ ರಾಜ್ಯ ಸರಕಾರ ಈಗಲಾದರೂ ಈ ಯಂತ್ರಗಳ ನಿರ್ವಹಣೆಗೆ ಟೆಂಡರ್ ಕರೆದು ಕಾರ್ಯಪ್ರವೃತ್ತರಾಗಿರುವುದು ಬಿಜೆಪಿಯ ಹೋರಾಟಕ್ಕೆ ಸಂದ ಗೆಲುವಾಗಿರುತ್ತದೆ. ರಾಜ್ಯ ಸರ್ಕಾರ ಇನ್ನು ಮುಂದೆಯಾದರೂ ನಿರ್ದಿಷ್ಟವಾಗಿ ಇವುಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿ ಕೊಡಲಿ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬಿಜೆಪಿ ಸೂತಕದ ಮನೆಯಲ್ಲಿ ರಾಜಕಾರಣ ಮಾಡುತ್ತದೆ ಎಂಬ ಕಾಂಗ್ರೆಸ್ಸಿನ ಬಾಲಿಷ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಭಟ್ಕಳದಲ್ಲಿ ನಡೆದ 11 ಜನರ ದುರಂತದ ಸಾವಿಗೆ ಕಾರಣ ಏನು ಎಂಬುದನ್ನು ಜಿಲ್ಲಾಡಳಿತ ತನಿಖೆಗೆ ಒಳಪಡಿಸಲಿ. ಹಿಂದೂಗಳ ನಂಬಿಕೆಯ ಸಂಕೇತವಾದ ಮೂರಿನ ಕಟ್ಟೆ ವಿಚಾರದಲ್ಲಿ ಹಿಂದೂ ಜನತೆಯ ಪರವಾಗಿ ಬಿಜೆಪಿ ಹೋರಾಟವನ್ನು ಕೈಗೊಂಡಿದೆ. ಭಟ್ಕಳದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಮತ್ತು ಹಿಂದುಗಳ ಭಾವನೆಗೆ ಗೌರವ ದೊರಕುವ ನಿಟ್ಟಿನಲ್ಲಿ ಸಂಸದ ಕಾಗೇರಿ ಅವರು ಜವಾಬ್ದಾರಿಯಿಂದ ಜಿಲ್ಲಾಡಳಿತದ ಜೊತೆಯಲ್ಲಿ ಚರ್ಚಿಸಿ ಮೂರಿನ ಕಟ್ಟೆ ವಿಚಾರವಾಗಿ ಗೌರವಯುತವಾದ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ. ಕೇವಲ ಪ್ರಚಾರಕ್ಕೊಸ್ಕರ ಹೇಳಿಕೆಗಳ ಮುಖಾಂತರ ಬಿಜೆಪಿಗರನ್ನು ಟೀಕಿಸುವುದನ್ನು ಬಿಟ್ಟು ಶಾಂತಿ ಸೌಹಾರ್ದತೆ ಮತ್ತು ಅಭಿವೃದ್ಧಿಯ ಕುರಿತು ಕಾಂಗ್ರೆಸ್ ಕೈಜೋಡಿಸಲಿ. ಆಕಸ್ಮಿಕ ದುರ್ಘಟನೆಗಳು ನಡೆದಾಗ ಜಿಲ್ಲೆಯ ಸಂತ್ರಸ್ತರಿಗೆ ಸಮರ್ಪಕವಾದ ನೆರವು ನೀಡದೆ ಬೇರೆ ರಾಜ್ಯದವರಿಗೆ ಬರಪೂರ ನೆರವು ನೀಡಿರುವ ಕಾಂಗ್ರೆಸ್ಸಿನ ಧೋರಣೆಯನ್ನು ನಾವು ನೋಡಿದ್ದೇವೆ. ಜಿಲ್ಲೆಯಲ್ಲಿ ಕಾಗೇರಿಯವರು ಸಂಸದರಾಗಿ ಕೈಗೊಂಡಿರುವ ಅಭಿವೃದ್ಧಿಯ ಕುರಿತು ಗಮನಿಸದೆ ಕೇವಲ ಅನವಶ್ಯಕವಾದ ಟೀಕೆಗಳನ್ನು ಮಾಡುವುದನ್ನು ಕಾಂಗ್ರೆಸ್ ವಕ್ತಾರರು ನಿಲ್ಲಿಸಲಿ. ತಮ್ಮ ತುಷ್ಟಿಕರಣದ ನೀತಿಯನ್ನು ಬಿಟ್ಟು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಇನ್ನು ಉಳಿದ ಎರಡು ವರ್ಷಗಳಲ್ಲಾದರೂ ಕಾರ್ಯ ಪ್ರವೃತ್ತರಾಗಲು ಕಾಂಗ್ರೆಸ್ ಶಾಸಕರಿಗೆ ಹೇಳಲಿ. ಎಂದು
ಸದಾನಂದ ಭಟ್ ಮಾಧ್ಯಮ ವಕ್ತಾರರು ಬಿಜೆಪಿ ಉತ್ತರ ಕನ್ನಡ ಇವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ
