ಸುದ್ದಿ ಕನ್ನಡ ವಾರ್ತೆ
. ಜೋಯಿಡಾ: ತಾಲೂಕಿನ ಗಣೇಶಗುಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಗೋವೊಂದನ್ನು ಕಡಿದ ಬಗ್ಗೆ ಮಾಹಿತಿ ಬಂದ ಬೆನ್ನಲ್ಲಿ ತಾಲೂಕಿನ ಹಿಂದು ಸಂಘಟನೆ ಹಾಗೂ ಗೋ ರಕ್ಷಣೆಯ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಗೋವಿನ ಹತ್ಯೆ ಹಾಗೂ ಮಾಂಸ ಪತ್ತೆಹಚ್ಚಿ ಒಂದು ಎತ್ತಿನ ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಹರಿಹರ,ಪಿಎಸ್‌ಐ ಮಹಾಂತೇಶ, ರಾಮನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇದವಿದ್ದರೂ ಜೋಯಿಡಾ, ದಾಂಡೇಲಿ ಭಾಗದಲ್ಲಿ ಗೋವುಗಳ – ಹತ್ಯೆ ನಡೆಯುತ್ತಿದೆ. ಈ ಬಗ್ಗೆ ಕೂಡಲೇ ಆಗಬೇಕು, ಗೋವುಗಳ ಹತ್ಯೆ ನಿಲ್ಲಬೇಕು ಎಂದು ಜೋಯಿಡಾ ಹಿಂದೂ ಸಂಘಟನೆಯ ಪ್ರಮುಖರಾದ ಅರುಣ ಕಾಮ್ರೆಕರ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಮಲಾಕರ ದೇಸಾಯಿ,ವಿಶ್ವನಾಥ ನಾಯ್ಕ, ದಿವಾಕರ ಕುಂಡಲಕರ, ದೀಪಕ ಗಾವಡಾ, ಶುಬೇಂದು ಕಾಮತ, ಅಭಿಷೇಕ,ಸಂತೋಷ ಸಾವಂತ, ಆಕಾಶ ಅನಸ್ಕರ, ಸೇರಿದಂತೆ ಇನ್ನಿತರರು ಸ್ಥಳದಲ್ಲಿ ಇದ್ದರು.
