ಸುದ್ದಿ ಕನ್ನಡ ವಾರ್ತೆ
ರಾಜ್ಯದಲ್ಲಿ ನೂತನವಾಗಿ ಮಂತ್ರಿ ಮಂಡಳ ಸದ್ಯದಲ್ಲೇ ಅಸ್ತಿತ್ವಕ್ಕೆ ಬರುವುದು ಖಚಿತ ವಾಗಿದ್ದು, ಯಲ್ಲಾಪುರ ಶಾಸಕ ರಾದ ಶಿವರಾಮ ಹೆಬ್ಬಾರರು ಸಚಿವರಾಗಲಿ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಗಳಾಗಲಿ ಎಂದು ಹೆಬ್ಬಾರರ ಅಭಿಮಾನಿ ಬಳಗವು ಕಾಂಗ್ರೆಸ್ ಅಧ್ಯಕ್ಷ ರಾದ ಡಿ ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದೆ.
ಜೋಯಿಡಾ ತಾಲೂಕಿನಲ್ಲಿ ಜನತೆ ಹಲವಾರು ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ, ರಾಜಕಾರಣಿ ಗಳು ಜನತೆಯ ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ, ತಾಲೂಕಾ ಕೇಂದ್ರ ವಾದರೂ ಇಲ್ಲಿ ಸರಿಯಾದ ವ್ಯವಸ್ಥೆ ಗಳಿಲ್ಲ, ಒಂದು ಮಳೆ ಬಂದರೆ ಸಾಕು ತಾಲೂಕಿನಲ್ಲಿ ವಾರಗಳ ಕಾಲ ವಿದ್ಯುತ್ ಇರೋದಿಲ್ಲ, ತಾಲೂಕಿನಲ್ಲಿಯೇ ವಿದ್ಯುತ್ ಉತ್ಪಾದನೆ ಆದರೂ ತಾಲೂಕಿಗೆ ಉಚಿತ ವಿದ್ಯುತ್ ಇಲ್ಲ, ತಾಲೂಕು ಕೇಂದ್ರ ದಲ್ಲಿ ಇರಲೇ ಬೇಕಾದ ನ್ಯಾಯಾಲಯ ವಿಲ್ಲ, ಸಬ್ ರಜೀಷ್ಟ್ರರ್ ಕಚೇರಿ ಇಲ್ಲ, ಸಾರಿಗೆ ಘಟಕ ವಿಲ್ಲ, ಪಕ್ಕ ದಲ್ಲೇ ಕಾಳಿನದಿ ಇದ್ದು, ಹೊರ ಜಿಲ್ಲೆಗಳಿಗೆ ನೀರು ಹೋದರೂ, ರಾಮನಗರ, ಜೋಯಿಡಾ ಜನತೆಗೆ ವಾರಕ್ಕೆ ಒಂದು ದಿನ ನೀರು ಎಂಬ ಸ್ಥಿತಿಇದೆ. ಈ ಬಗ್ಗೆ ಇಲ್ಲಿನ ರಾಜಕಾರಣಿಗಳು, ರಾಜಕೀಯ ಆಸಕ್ತರು ಪ್ರಯತ್ನಿಸಿದ ಬಗ್ಗೆ ತಿಳಿದು ಬರುತ್ತಿಲ್ಲ, ಒಟ್ಟಾರೆ ಸಮಸ್ಯೆ ಗಳಿಂದ ಜೋಯಿಡಾ ತುಂಬಿ ಕೊಂಡಿದೆ.
ಜೋಯಿಡಾ ದ ಸಮಸ್ಯೆ ಗಳ ಅರಿವಿದ್ದ ಶಿವರಾಮ ಹೆಬ್ಬಾರರು ಉಸ್ತುವಾರಿ ಸಚಿವರಾದರೆ ತಾಲೂಕಿನ ಹಲವಾರು ಸಮಸ್ಯೆ ಗಳನ್ನು ಬಗೆ ಹರಿಸುವ ಶಕ್ತಿ ಅವರಲ್ಲಿದೆ ಎನ್ನುವುದು ಅಭಿಮಾನಿ ಗಳ ಹೇಳಿಕೆ ಯಾಗಿದೆ, ಜೊತೆಗೆ ಕಾಳಿನದಿಗೆ, ಶಿವಪುರದಲ್ಲಿ ತೂಗುಸೇತುವೆ ಪಕ್ಕದಲ್ಲಿ ಸೇತುವೆಯ ನಿರ್ಮಾಣ ವಾದಲ್ಲಿ ಜೋಯಿಡಾ ದ ರೈತರು ತಮ್ಮ ವ್ಯವಹಾರಕ್ಕೆ ಹಳಿಯಾಳ ತಾಲೂಕನ್ನು ಸುತ್ತಿ ನೂರು ಕಿ ಮೀ ದೂರದಿಂದ ಯಲ್ಲಾಪುರಕ್ಕೆ ಹೋಗುವದು ತಪ್ಪಿ ಹತ್ತಿರದಲ್ಲೇ ವ್ಯಾಪಾರಿ ಕೇಂದ್ರ ಸಿಗುತ್ತದೆ, ಡಿ ಕೆ. ಶಿ ಅವರ ಆಪ್ತ ಬಳಗದಲ್ಲಿ ಹೆಬ್ಬಾರರು ಇರುವ ಕಾರಣ ಅವರು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳು ಆಗಬೇಕು, ಆದರೆ ತುಂಬಾ ಸಂತೋಷ, ಸದಾ ಒಂದಿಲ್ಲೊಂದು ಕೆಲಸವನ್ನು ಜನತೆಗೆ ನೀಡುತ್ತಿರುವ ಹೆಬ್ಬಾರರು ನಮ್ಮ ಜನತೆಗೂ ನೆರವಾಗಲು, ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಅಭಿಮಾನಿ ಬಳಗ ಹಾರೈಸಿದೆ.
