ಸುದ್ದಿ ಕನ್ನಡ ವಾರ್ತೆ

. ದಾಂಡೇಲಿ:ಬೊಮ್ಮನಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸುಮಾರು 24 ವರ್ಷದ ಕಾಡಾನೆ ಯೊಂದು (ಗಂಡಾನೆ) ಮೃತಪಟ್ಟಘಟನೆ ನಡೆದಿದೆ. ಇದು ವನ್ಯಜೀವಿಪ್ರೇಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ನೀರಿನಲ್ಲಿ ತೇಲುತ್ತಿದ್ದ ಕಾಡಾನೆಯ ಮೃತದೇಹದ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ದಂಡೆಗೆ ತಂದಿದ್ದಾರೆ. ಅದರ ಅಂತ್ಯಸಂಸ್ಕಾರವನ್ನು ಸೋಮವಾರ ಸಂಜೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ.
ಪ್ರಾಥಮಿಕವಾಗಿ ಕಾಡಾನೆ ಸಾವಿನ ಕಾರಣ ಸ್ಪಷ್ಟವಾಗಿಲ್ಲ. ಆದರೆ ಕಳೆದ ವರ್ಷ ಅಂಬಿಕಾ ನಗರ ಸಮೀಪದ ಕಾಡಿನಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆಯೊಂದು ಮೃತಪಟ್ಟ ಘಟನೆ ನಡೆದಿತ್ತು.

ಗಂಭೀರ ಈಗ ಮತ್ತೊಂದು ಕಾಡಾನೆ ಮೃತಪಟ್ಟಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಕೇವಲ ಪ್ರಾಕೃತಿಕ ಸಾವುಗಳ ಸರಣಿಯೇ ಅಥವಾ ಮಾನವ ಚಟುವಟಿಕೆಗಳಿಂದ ವನ್ಯಜೀವಿಗಳ ಜೀವಕ್ಕೆ ಅಪಾಯ ಉಂಟಾಗುತ್ತಿದೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ. ಎಂಬ ದಾಂಡೇಲಿ ಅರಣ್ಯ ಪ್ರದೇಶವು ಜೈವವೈವಿಧ್ಯತೆಯ ಪ್ರಮುಖನೆಲೆಯಾಗಿದ್ದು, ಕಾಡಾನೆಗಳ ಸಂಚಾರಕ್ಕೆ ಪ್ರಸಿದ್ಧವಾಗಿದೆ.