ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 22ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಟ್ಯಾಲೆಂಟ್ ಸೇತು ಗೋವಾ, ನಿರಾಕರ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಶಿರವಾಡ ಟಾಟಾ ಎಲೆಕ್ಟೋನಿಕ್ಸ್ ಬೆಂಗಳೂರು, ನವಭಾರತ ಫರ್ಟಿಲೈಜರ್ ಹುಬ್ಬಳ್ಳಿ, ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಸೇತು ಕಾರವಾರ, ದೊಡ್ತಾ ಡೈರಿ ಯಲ್ಲಾಪುರ, ಕರಾವಳಿ ಟೀಚರ್ಸ್ ಹೆಲ್ಪಲೈನ್ ಧಾರವಾಡ, ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದ್ರೆ, ಅನೋನ್ ಟೆಕ್ನಿಕಲ್ಸ್ ಮಂಗಳೂರು, ಭಾರತೀಯ ಜೀವ ವಿಮಾ ನಿಗಮ ದಾಂಡೇಲಿ, ಬಾಹೇಟಿ ಕನ್ವರ್ಟಸ್ರ ದಾಂಡೇಲಿ ಮೊದಲಾದ ಇಪ್ಪತ್ತಕ್ಕು ಹೆಚ್ಚು ಕಂಪನಿಗಳು ಭಾಗವಹಿಸುತ್ತವೆ.
ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಸಿಎ, ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಸಿಎ, ಬಿ.ಎಡ್, ಐ.ಟಿ.ಐ, ಮತ್ತು ಡಿಪ್ಲೋಮಾ ಪದವಿಗಳನ್ನು ಪಡೆದ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9844301541, 9243976836, 9481135727. ಸಂಪರ್ಕಿಸಬಹುದು.
