ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಎಂ. ಎಂ. ಜೋಶಿ ಗಣೇಶ ನೇತ್ರಾಲಯ ಶಿರಸಿ ಹಾಗೂ ಟಿ.ಎಂ.ಎಸ್. ಸಿದ್ದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ 27ರ ಬುಧವಾರದಂದು ಉಚಿತ ಕಣ್ಣಿನ ಆಯೋಜಿಸಲಾಗಿದೆ. ತಪಾಸಣಾ ಶಿಬಿರವನ್ನು ಸಿದಾಪುರದ ಟಿ.ಎಂ.ಎಸ್. ಸಭಾಭವನದಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಈ ಶಿಬಿರವು ಜರುಗಲಿದೆ.
ಶಿರಸಿಯ ಎಂ. ಎಂ. ಜೋಶಿ ಗಣೇಶ್ ನೇತ್ರಾಲಯದ ತಜ್ಞ ವೈದ್ಯರಾದ ಡಾ. ವಿಶ್ವನಾಥ ಅಂಕದ್ ಹಾಗೂ ನೇತ್ರಾಧಿಕಾರಿ ರಘು ಪಿ. ಜಿ. ಅವರು ಶಿಬಿರದಲ್ಲಿ ಪಾಲ್ಗೊಂಡು ಸಾರ್ವಜನಿಕರ ಕಣ್ಣಿನ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ. ನಾಯ್ಕ ಅವರು ಈ ಜನೋಪಕಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಣ್ಣಿನ ವಿವಿಧ ತೊಂದರೆಗಳಿಂದ ಬಳಲುತ್ತಿರುವ ಸಾರ್ವಜನಿಕರು ಹಾಗೂ ರೈತರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಉಪಾಧ್ಯಕ್ಷ ಎಂ. ಜಿ. ನಾಯ್ಕ ಹಾದ್ರಿಮನೆ ಹಾಗೂ ವ್ಯವಸ್ಥಾಪಕ ಸತೀಶ ಹೆಗಡೆ ಅವರು ಪ್ರಕಟಣೆಯ ಮೂಲಕ ಜಂಟಿಯಾಗಿ ವಿನಂತಿಸಿಕೊಂಡಿದ್ದಾರೆ.
