ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ನಾರಾಯಣಗುರುನಗರದ ಅಭಯ ವಿನಾಯಕ ದೇವಸ್ಥಾನದ 19ನೇ ವಾರ್ಷಿಕೋತ್ಸವವು ಮೇ 12 ರ ಮಂಗಳವಾರರಂದು ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಕಲಾವೃದ್ಧಿ ಹವನ, ಪಂಚಗವ್ಯ ಹವನ ಸ್ಥಾನಶುದ್ಧಿ ಬಿಂಬಶುದ್ಧಿ ಮತ್ತು 108, ಅಷ್ಟೋತ್ತರ, ಶತ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸರ್ವಾಭರಣ ಅಲಂಕಾರ, ಪುಷ್ಪಾಲಂಕಾರ, ನಾಲ್ಕು ಕಾಯಿ ಗಣಹವನ, ಪೂರ್ಣಾಹುತಿ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ 12:30 ರಿಂದ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಹಾಗೂ ಸಂಜೆ 3.30 ರಿಂದ ಪಲ್ಲಕ್ಕಿ ಉತ್ಸವ, ನಂತರ ಅಷ್ಠಾವಧಾನ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
