ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಹನುಮಾನಗಲ್ಲಿ ಸೂಪಾ ರೋಡ್, ಶ್ರೀ ಹನುಮಾನ ದೇವರ ಜನ್ಮೋತ್ಸವ ದಿನಾಂಕ:02-04-2026 ರ ಗುರುವಾರರಂದು ನಡೆಯಲಿದೆ. ಜನ್ಮೋತ್ಸವದ ನಿಮಿತ್ತ ಬೆಳಿಗ್ಗೆ 6:00 ಗಂಟೆಗೆ ಶ್ರೀ ಹನುಮಾನ ದೇವರ ಜನ್ಮೋತ್ಸವ ನಡೆಯುವುದು.ಮಧ್ಯಾಹ್ನ 1:00 ಗಂಟೆಗೆ ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆ ನಡೆಯಲಿದೆ.
ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ. ಮಧ್ಯಾಹ್ನ 1:00 ಗಂಟೆಯಿಂದ (ಮಹಾಪ್ರಸಾದ)ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 09:00 ಗಂಟೆಗೆ ಶ್ರೀ ದೇವರ ಫಲಾಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ಭಕ್ತರ ವಿಶೇಷ ಮನರಂಜನೆಗಾಗಿ ರಾತ್ರಿ11:30 ಗಂಟೆಗೆ ಶ್ರೀ ಹನುಮಾನ ನಾಟ್ಯ ಮಂಡಲ ರಾಮನಗರ ಕಲಾವಿದರಿಂದ ಅರ್ಪಿಸುವ ಶ್ರೀ ಶರದ್ ವಾಘಮಾರೇ ವಿರಚಿತ ‘ರಕ್ತಾತ ರಂಗಲಾ ಗಾವ್ ‘ಎಂಬ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಹನುಮಾನ ದೇವಸ್ಥಾನ ಸಮಿತಿ, ಹನುಮಾನ ಯುವಕ ಮಂಡಲ ಹನುಮಾನ ಗಲ್ಲಿ ಸೂಪಾ ರೋಡ್ ರಾಮನಗರ ವಿನಂತಿಸಿಕೊಂಡಿದ್ದಾರೆ.
