ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಕುಂಬಾರವಾಡಾದಲ್ಲಿ ವ್ಯಕ್ತಿ ಯೋರ್ವ್ ತಾನು ಎಕ್ಸ್ವೈಜ್ ಆಪಿಸರ ಎಂದು ಅಂಗಡಿಗಳಿಗೆ ನುಗ್ಗಿದ ಘಟನೆ ಇಂದು ನಡೆದಿದೆ ಈ ಬಗ್ಗೆ ಜೊಯಿಡಾ ಪೋಲಿಸರಿಗೆ ಮಾಹಿತಿ ನೀಡಲಾಗಿದ್ದು ಈತನ ಹುಡುಕಾಟ ನಡೆದಿದೆ .

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕಪ್ಪು ಸ್ಕೂಟರ್ ಮೇಲೆ ಬಂದ ಈತ ಕುಂಬಾರ ವಾಡಾದ ಮೂರು ಅಂಗಡಿಗಳಿಗೆ ಹೋಗಿ ತಾನು ದಾಂಡೇಲಿ ಎಕ್ಸೈಜ್ ಆಪಿಸಿನಿಂದ ಬಂದವ ಎಂದು ಹೇಳಿ ಧಮಕಿ ಹಾಕಿದ್ದಾನೆ. ಅಂಗಡಿ ಒಳಗೆ ಹೋಗಿ ತಪಾಸಣೆ ನಡೆಸಿದ್ದಾನೆ . ಹಣ ಲಪಟಾಯಿಸುವ ಉದ್ದೇಶ ಹೊಂದಿರುವ ಆತ ಒಬ್ಬನೇ ಬೈಕ್ ಮೇಲೆ ಬಂದು ಹೀಗೆ ಅಂಗಡಿ ಒಳಗೆ ಹೋಗುತ್ತಿದ್ದಾಗ ಸಂಶಯ ಪಟ್ಟು ಸ್ಥಳಿಯರು ವಿಚಾರಣೆ ಮಾಡಿದಾಗ ಉತ್ತರ ನೀಡಲು ತಡ ಬಡಿಸಿದ್ದಾನೆ .

ಆಗ ಸ್ಥಳೀಯರು ಹೆಚ್ಚು ಜಮಾಯಿಸುತ್ತಿದ್ದಂತೆ ಈತ ಕಾಲು ಕಿತ್ತಿದ್ದು ಅಣಶಿ, ಕದ್ರಾ ಮಾರ್ಗವಾಗಿ ಸ್ಕೂಟರ್ ಮೇಲೆ ಹೋಗಿದ್ದಾನೆ.ಎಂದು ತಿಳಿದು ಬಂದಿದೆ. ಕುಂಬಾರವಾಡಾ ದಂತೆ ತಾಲೂಕಿನಲ್ಲಿ , ಗ್ರಾಮೀಣ ಬಾಗದಲ್ಲಿ ಇತರ ಪ್ರದೇಶದಲ್ಲಿ ಈ ರೀತಿ ಹಗಲು ಅಥವಾ ರಾತ್ರಿಯಲ್ಲಿ ಎಕ್ಸಸೈಜ್ ಆಪಿಸರ ಎಂದು ಹೇಳಿ ಅಂಗಡಿ, ಮನೆಗಳಿಗೆ ನುಗ್ಗುವುದು ಆತಂಕದ ವಿಷಯ ವಾಗಿದೆ, ಮನೆ ಗಳಲ್ಲಿ ಒಬ್ಬರೇ ಹೆಣ್ಣುಮಕ್ಕಳು ಇರುವಾಗ ಇಂತವರು ಬಂದು ಧರೋಡೆ ಮಾಡಿದರೆ ಗತಿಯೇನು ಎಂಬ ಭಯದ ವಾತಾವರಣ ಗ್ರಾಮೀಣ ಜನರಲ್ಲಿ ಬಂದಿದೆ.

ಕಪ್ಪು ಸ್ಕೂಟರ್ ಮೇಲೆ ಬಂದ ಈತ ದಾಂಡೇಲಿ ಎಕ್ಸಸೈಜ್ ಆಪಿಸರ ಹೆಸರಿನಲ್ಲಿ ಕುಂಬಾರ ವಾಡಾ ಅಂಗಡಿಗಳಿಗೆ ನುಗ್ಗಿ ಕೊನೆಗೆ ಅಣಶಿ, ಕಡೆಗೆ ಹೋಗಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ . ಇನ್ನೆಲ್ಲೆಲ್ಲಿ ಈತ ಓಡಾಡಿ ಬಂದಿದ್ದ, ಹಿಂದೆ ಈ ರೀತಿ ಮಾಡಿದ್ದನೆ ಎಂದು ಪೊಲೀಸರು ತನಿಖೆ ಮಾಡಬೇಕು, ಎಂದು ಸಾರ್ವಜನಿಕ ರು ಒತ್ತಾಯಿಸಿದ್ದಾರೆ. ಈ ರೀತಿ ಹಿಂದೆ ಮಾಡಿದ ಧೈರ್ಯ ದಿಂದಲೇ ಮತ್ತೆ ಬಂದಿರಬೇಕು ಎಂಬ ಶಂಕೆ ವ್ಯಕ್ತ ಪಡಿಸಿದ್ದಾರೆ.

ಇದೀಗ ಬಂದ ಮಾಹಿತಿಯಂತೆ ಆತನನ್ನು ಕದ್ರಾ ದಲ್ಲಿ ಹಿಡಿಯ ಲಾಗಿದೆ ಎಂದು ತಿಳಿದು ಬಂದಿದೆ