ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಗುಂದ – ಉಳವಿ ರಸ್ತೆಯ ಕಾನೇರಿ ಯಿಂದ ಗುಂದ ದ ಉಳವಿ ಕ್ರಾಸ್ ವರೆಗೆ ರಸ್ತೆ ತುಂಬಾ ಹದಗೆಟ್ಟಿದೆ ಕಳೆದಮೂರು ವರ್ಷ ಗಳಿಂದ ಜನರು ಈ ರಸ್ತೆಯಲ್ಲಿ ಓಡಾಡಿ ಸಾಕಪ್ಪ ಸಾಕು ಈ ರಸ್ತೆಯ ಸಹವಾಸ ಎಂದು, ಉತ್ತಮ ರಸ್ತೆಗಾಗಿ ಕಾಯ್ದು ಕಾಯ್ದು ಜನಪ್ರತಿನಿದಿಗಳಿಗೆ ಶಾಪ ಹಾಕದ ದಿನಗಳಿಲ್ಲ, ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಜನತೆ ವಿಧಾನ ಸಭಾ ಚುನಾವಣೆ ಯಲ್ಲಿ ಆಯ್ಕೆಯಾದ ಶಾಸಕರಿಗೆ ಹೆಚ್ಚಿನ ಬೆಂಬಲ ನೀಡಿದರೂ ಅಭಿವೃದ್ಧಿ ಯಲ್ಲಿ ನಮ್ಮನ್ನು ಕಡೆಗಣಿಸಿದರು ಎಂಬ ದುಃಖ ಮತದಾರ ರಲ್ಲಿ ಕಂಡು ಬಂದಿದೆ. ಇದಕ್ಕೆಲ್ಲ ಲೋಕೋಪಯೋಗಿ ಇಲಾಖೆಯ ನಿಸ್ಕಾಳಜಿ ಯೇಕಾರಣ ವಾಗಿದೆ ಈ ರಸ್ತೆ ಸುಧಾರಣೆ ಕಾಮಗಾರಿ 2025 ಏಪ್ರಿಲ್ ನಲ್ಲಿ ಶುರುವಾಗಿತ್ತು, ಆದರೆಗುತ್ತಿಗೆದಾರನ ನಿಧಾನಗತಿಯ ಹಾಗೂ ನಿರ್ಲಕ್ಷ್ಯದ ಕಾರಣದಿಂದ ರಸ್ತೆ ಕೆಲಸ ಮಾತ್ರ ಮುಗಿಯದೆ ಹೊಂಡಾಗುಂಡಿ ರಸ್ತೆಯಲ್ಲಿ ಯೇ ಸ್ಥಳೀಯರು ,ಪ್ರವಾಸಿಗರು ತಿರುಗಾಡಿ ಹೈರಾಣಾಗಿದ್ದಾರೆ.
ಕಾನೇರಿದಿಂದ – ಹೆಣಕೋಳ ಕ್ರಾಸ ವರೆಗೆ ಡಾಂಬರೀಕರಣಕ್ಕೆ ರೂಪಾಯಿ 9 ಕೋಟಿ ಹಣ ಲೋಕೋಪಯೋಗಿ ಇಲಾಕೆಯಿಂದ ಮಂಜೂರು ಮಾಡಲಾಗಿತ್ತು.ಆದರೆ ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗಿದ ಕಾರಣ 12 ಕಿ.ಮೀ ರಸ್ತೆ ಮಾಡಲು 2 ವರ್ಷ ಆದರೂ ಆಗಿಲ್ಲ, ಮುಂದೆ ಮಳೆಗಾಲ ಪ್ರಾರಂಭ ವಾಗುತ್ತದೆ, ಅಷ್ಟರೊಳಗೆ ಕಾನೇರಿಯಿಂದ ಗುಂದ ಕ್ರಾಸ್ ತನಕ ರಸ್ತೆ ಮಾಡಿಕೊಡಿ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಜನತೆ ಈ ಮೂಲಕ ಒತ್ತಾಯಿಸಿದ್ದಾರೆ
ಈಗಾಗಲೇ ಹೆಣಕೊಳ ಕ್ರಾಸ ನಿಂದ ರಸ್ತೆ ಕೆಲಸ ಪ್ರಾರಂಭಿಸಿ ಸುಮಾರು 7 ಕಿ.ಮೀ ಕೆಲಸ ಮುಗಿದಿದ್ದು, ಇನ್ನೂ 5 ಕಿ.ಮೀ ಕೆಲಸ ಮಾಡಬೇಕಿದೆ, ಎಲ್ಲಿ ಅಗತ್ಯತೆ ಇದೆ ಅಲ್ಲಿ ಕೆಲಸ ಪ್ರಾರಂಭಿಸದೆ ಹೆಣಕೊಳ ಕ್ರಾಸ ನಿಂದ 2 ಕಿಮೀ ರಸ್ತೆಗೆ ಕಡಿಕರಣ ,ಡಾಂಬರಿಕರಣ ಮಾಡಲು ಒಂದು ವರ್ಷ ಗುತ್ತಿಗೆದಾರ ತೆಗೆದುಕೊಂಡಿದ್ದಾನೆ ಈ ಬಗ್ಗೆ ಲೋಕೋಪಯೋಗಿ ಇಲಾಕೆಗೆ ಮಾಧ್ಯಮ ದವರು ಹಲವು ಬಾರಿ ಭೇಟಿಯಾಗಿ ಸಮಸ್ಯೆ ತಿಳಿಸಿದರೂ ಶಾಸಕರ ಒತ್ತಾಯದ ಮೇರೆಗೆ ಗುತ್ತಿಗೆ ದಾರ ಭಾಗವತಿ ಕಡೆ ಕೆಲಸ ಮಾಡಿಸುತ್ತಿದ್ದಾನೆ ಅಲ್ಲಿ ಮುಗಿದ ತಕ್ಷಣ ಗುಂದ ರಸ್ತೆ ಮಳೆಗಾಲದ ಮೊದಲೇ ಮುಗಿಸಿ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುವ ಮೂಲಕ ಸ್ಥಳೀಯ ಜನಪ್ರತಿನಿದಿ ಗಳನ್ನು ಅಲಕ್ಸಿಸಿದ್ದಾರೆ ಎನ್ನುವದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಜನರಿಗೆ ಎಲ್ಲಿ ರಸ್ತೆ ಅತ್ಯಗತ್ಯವಿದೆ ಎಲ್ಲಿ ಹೆಚ್ಚು ಹಾಳಾಗಿದೆ ಎಂಬುದನ್ನು ಅಧಿಕಾರಿಗಳು ಗಮನಿಸಿ ಅಲ್ಲಿ ಮೊದಲು ರಸ್ತೆ ಸರಿಪಡಿಸಬೇಕಾಗಿತ್ತು. ಅಧಿಕಾರಿಗಳ ಸೂಚನೆ ಯಂತೆ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಇದಕ್ಕೆಲ್ಲ ಶಾಸಕರೇ ಉತ್ತರಿಸಬೇಕು ಎನ್ನುವುದು ಈ ಭಾಗದ ಜನರ ಮಾತಾಗಿದೆ.
ಉಳವಿ ನಂದಿಗದ್ದೆ ಗುಂದ ಭಾಗದಲ್ಲಿ ರಸ್ತೆಗಳ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದ್ದು ಶಾಸಕರು ಈ ಬಗ್ಗೆ ಕಾಳಜಿ ವಹಿಸಿ ಮಂಜೂರಾದ ಕೆಲಸ‌ ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಹೇಳಬೇಕು,ನಂದಿಗದ್ದೆ ಯ ಗುಂದ ಸರ್ಕಲ್ ನಲ್ಲಿ ನಡುರಸ್ತೆ ಯಲ್ಲಿ ಕಳೆದ ವರ್ಷ ದೊಡ್ಡ ಆಳೆತ್ತರದ ತಗ್ಗು ನಿರ್ಮಾಣ ವಾಗಿತ್ತು ಅಲ್ಲಿ ಆಗ ಮಣ್ಣು ತುಂಬಿಸ ಲಾಗಿತ್ತು ಅಲ್ಲಿ ಕೂಡ ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಆಗದಂತೆ ಸರಿಪಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಸವರಾಜ್, ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತರರು, ಕೂಡಲೇ ಹಾಳಾದ ರಸ್ತೆ ಸರಿಪಡಿಸಲು ಗುತ್ತಿಗೆ ದಾರನಿಗೆ ಹೇಳಿದ್ದೇನೆ.