ಸುದ್ಧಿಕನ್ನಡ ವಾರ್ತೆ
ಧಾರವಾಡ: ಧಾರವಾಡದ ವೈ.ಬಿ ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಪ.ಪೂ. ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ದಿಶಾ. ಎಸ್ .ಭಟ್ ಇವಳು ಪಿಯುಸಿ ಪರೀಕ್ಷೆಯ ಮರುಮೌಲ್ಯ ಮಾಪನದ ಬಳಿಕ 600 ಕ್ಕೆ 589 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾಳೆ.

ದಿಶಾ ಭಟ್ ಇವಳು ಪ್ರಾಥಮಿಕ ಫಲಿತಾಂಶದಲ್ಲಿ 585 ಅಂಕಗಳನ್ನು ಪಡೆದಿದ್ದಳು. ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ 4 ಅಂಕಗಳು ಹೆಚ್ಚಾಗಿದ್ದು ಒಟ್ಟೂ 589 ಅಂಕಗಳಿಗೆ ಏರಿಕೆಯಾಗಿದೆ.

ಈ ಸಾಧನೆಯೊಂದಿಗೆ ವಿದ್ಯಾರ್ಥಿನಿ ದಿಶಾ ಇವಳು ಈ ಸಾಧನೆಯೊಂದಿಗೆ ರಾಜ್ಯಕ್ಕೆ 11 ನೇಯ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ 5 ನೇಯ ಸ್ಥಾನ ಪಡೆದಿದ್ದಾಳೆ. ದಿಶಾ ಇವಳ ಸಾಧನೆಗೆ ಕಾಲೇಜಿನ ಅಧ್ಯಕ್ಷ ಪ್ರೊ. ನಾಗೇಶ್ ಅಣ್ಣಿಗೇರಿ, ಆಡಳಿತ ವರ್ಗ, ಉಪನ್ಯಾಸಕರು, ಹಾಗೂ ಪಾಲಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕುಮಾರಿ ದಿಶಾ ಭಟ್ ಇವಳು ಧಾರವಾಡದ ಹೈಕೋರ್ಟ ನ್ಯಾಯವಾಧಿ ಹಾಗೂ ಶ್ರೀಕ್ಷೇತ್ರ ಇಡಗುಂಜಿಯ ನಿವಾಸಿಯಾಗಿರುವ ಸುರೇಶ್ ಶಿವರಾಮ್ ಭಟ್ ಹಾಗೂ ಸುಜಾತಾ ಭಟ್ ದಂಪತಿಗಳ ಪುತ್ರಿಯಾಗಿದ್ದಾಳೆ.