ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಡಿಗ್ಗಿ ಆಸ್ಪತ್ರೆಯ ವೈದ್ಯ ಲೆನ್ಸರ್ ಲೋಬೊ ಸಾವು ಸಂಶಯಾಸ್ಪದ ವಾಗಿದ್ದು ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ಪತ್ನಿ ನಿಖಿತಾ ಲೋಬೋ ಪೋಲಿಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ .
ಜೋಯಿಡಾ ಪೋಲಿಸ್ ಠಾಣೆಗೆ ವೈದ್ಯನ ಪತ್ನಿ ನೀಡಿದ ದೂರಿನಲ್ಲಿ ತನ್ನ ಪತಿ ಲೆನ್ಸರ್ ಲೋಬೊ ಜೋಯಿಡಾದ ಇಬ್ರಾಹಿಂ ಎಂಬಾತ ಗೆಳೆಯನೊಂದಿಗೆ ಕಳೆದ ೨೫ ಮತ್ತು ೨೬ ಎರಡುದಿನ ಗೋವಾಕ್ಕೆ ಹೋಗಿ ಕುಡಿದು ೨೭ ಕ್ಕೆ ಮನೆಗೆ ಬಂದಾಗ ಆರೋಗ್ಯ ಸರಿ ಇರಲಿಲ್ಲ ತಾವೆ ಸ್ವತಃ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಊಟ ಕೂಡಾ ಮಾಡುತ್ತಿರಲಿಲ್ಲ ಹೀಗಾಗಿ ಅಸ್ವಸ್ಥರಾಗಿ ಕಾಣುತಿದ್ದರು. ಕಳೆದ ೩೦ ರಂದು ತಮ್ಮ ಸ್ವಯಂ ಚಿಕಿತ್ಸೆ ಸ್ಪಂದಿಸದೇ ಇದ್ದಾಗ ಅವರು ಸಂಜೆ 6 30 ರ ವೇಳೆಗೆ ನಿತ್ರಾಣ ರಾದರು ಆಗ ನಾನು ಅವರನ್ನು ಜೋಯಿಡಾ ಆಸ್ಪತ್ರೆಗೆ ಕರೆದುಕೊಂಡು ಹೋದೆ,ಆದರೆ ಆಗಲೇ ಲೋಬೊ ಸಾವನ್ನಪ್ಪಿದ್ದಾಗಿ ಆಸ್ಪತ್ರೆಯ ವೈದ್ಯರು ಹೇಳಿರುತ್ತಾರೆ. ಎಂದು ದೂರಿನಲ್ಲಿ ಪತ್ನಿ ತಿಳಿಸಿದ್ದು, ಪತಿಯ ಸಾವಿನಲ್ಲಿ ಸಂಶಯ ವಿದೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ವೈದ್ಯರ ಸಾವು ಕುಡಿತದ ಪರಿಣಾಮವೋ, ಅನಾರೋಗ್ಯದ ಕಾರಣವೊ ಅಥವಾ ವಿಷಾಹಾರ ಸೇವನೆಯೋ ಎನ್ನುವುದು ಸಂಶಯಕ್ಕೆ ಕಾರಣವಾಗಿದ್ದು, ವೈದ್ಯರ ಜೋತೆ ಹೋದ ಗೆಳೆಯನ ಬಗ್ಗೆ ಪತ್ನಿ ಸಂಶಯ ವ್ಯಕ್ತಪಡಿಸಿದ್ದು , ಘಟನೆಯ ಸಂಪೂರ್ಣ ತನಿಖೆ ನಡೆಸಿ ಸಾವಿಗೆ ನ್ಯಾಯ ನೀಡುವಂತೆ ಬೇಡಿಕೊಂಡಿದ್ದಾರೆ.ಆದರೆ ಕೆಲವು ಮಾಧ್ಯಮ ದವರು ಡಾಕ್ಟರ್ ಲೋಬೊ ಡಿಗ್ಗಿಯಲ್ಲೇ ಇದ್ದರು, ಹೃದಯಾಘಾತ ವಾಯಿತು ಎಂದೆಲ್ಲ ಹೇಳಿ ಸಂಶಯ ಬರುವಂತೆ ಮಾಡಿದ್ದರು
ಡಾ ಲೆನ್ಸರ್ ಲೋಬೊ ಜೋಯಿಡಾ ದಲ್ಲೇ ಮನೆ ಮಾಡಿಕೊಂಡು ಆಗಾಗ ಡಿಗ್ಗಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು, ಕಳೆದ ವರ್ಷದ ಕೆ ಡಿ ಪಿ ಸಭೆ ಯಲ್ಲಿ ಸಾರ್ವಜನಿಕರು ಡಿಗ್ಗಿ ಗೆ ಡಾಕ್ಟರ್ ಸರಿಯಾಗಿ ಹೋಗುವಂತೆ ಮಾಡಿಕೊಡಿ ಎಂದುಬೇಡಿಕೊಂಡಿದ್ದನ್ನು ಸ್ಮರಿಸಬಹುದು. ಡಾ ಲೆನ್ಸರ್ ಲೋಬೊ ಸಾವಿನ ಪ್ರಕರಣದ ತನಿಖೆಯನ್ನು ಜೋಯಿಡಾ ಪಿಎಸ್ಐ ಮಹೇಶ ಮಾಳಿ ಕೈಕೊಂಡಿರುತ್ತಾರೆ.
