ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಸಾರ್ವಜನಿಕರ ವತಿಯಿಂದ ತಹಸೀಲ್ದಾರ್ ಮಂಜುನಾಥ್ ಮುನ್ನೊಳ್ಳಿ ಅವರಿಗೆ,ಗೋ ಮಾತೆಯನ್ನು ರಕ್ಷಿಸಬೇಕು ಹಾಗೂ ಗೋ ಮಾತೆಯನ್ನ ರಾಷ್ಟ್ರಮಾತೇ ಯನ್ನಾಗಿ ಮಾಡಬೇಕು ಎಂದು ಜೋಯಿಡಾ ಸಾರ್ವಜನಿಕ ರು ಮಾನ್ಯ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ರಾಷ್ಟ್ರಪತಿಗಳಿಗೆ ಹಾಗೂ ದೇಶದ ಪ್ರಧಾನಿಯವರಿಗೆ ಮನವಿಯನ್ನು ತಹಸೀಲ್ದಾರ್ ಮೂಲಕ ನೀಡಿದರು ದೇಶದ ನಾನಾ ಭಾಗ ಗಳಲ್ಲಿ ಗೋವಿನ ವಧೆ ನಡೆಯುತ್ತದೆ, ಹಿಂದೂ ಬಾಂದವರು ಗೋವನ್ನು ಪೂಜಿಸುತ್ತೇವೆ, ಹಿಂದೂಸ್ತಾನದಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದೆ, ಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ ಹಾಗಾಗಿ ನಾವು ಈ ಮನವಿಯ ಮೂಲಕ ಗೋವನ್ನು ರಾಷ್ಟ್ರ ಮಾತೆಯನ್ನಾಗಿ ಮಾಡಿ ಎಂದು ಮನವಿ ನೀಡುತ್ತಿದ್ದೇವೆ ಎಂದು ಅರುಣ ಕಾಮರೆಕಾರ್ ಹೇಳಿದರು
ಈ ಸಂಧರ್ಭದಲ್ಲಿ ಜೋಯಿಡ ತಾಲೂಕಿನ ಹಿಂದೂ ಬಾಂಧವರಾದ ಅಭಿಷೇಕ್ ನಾಯ್ಕ್, ರವಿ ಗೋಕಳಕಾರ್, ಕಮಲಕರ ದೇಸಾಯಿ, ವಿಶಾಲ್ ದೇಸಾಯಿ, ವಿಠೋಬ್ ದೇಸಾಯಿ, ಸಂದೇಶ ದೇಸಾಯಿ, ಮಂಜುನಾಥ್ ಇತರರು ಉಪಸ್ಥಿತರಿದ್ದರು.
ಗೋವು ರಾಷ್ಟ್ರ ಮಾತೆ ಎಂದು ತಹಶೀಲ್ದಾರರಿ ಗೆ ಮನವಿ ನೀಡಿದ ಅರುಣ ಕಾಮರೆಕಾರ್
