ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಉಳವಿ ಚೆನ್ನಬಸವೇಶ್ವರ ಪ್ರೌಢಶಾಲೆ ಮಕ್ಕಳಿಂದ ಎಸ್‌ ಎಸ್ಎಲ್ ಸಿ ಪರೀಕ್ಷೆಯಲ್ಲಿ 100 % ಫಲಿತಾಂಶ ದಾಖಲಾಗಿದೆ.

ಚೆನ್ನಬಸವೇಶ್ವರ ಪ್ರೌಢಶಾಲೆಯ ಆಧೀಶ್ ವಿಭೂತಿಮಠ 88 % ಪ್ರಥಮ, ಅಕ್ಷಯ ಚಕ್ರಸಾಲಿ 82 % ದ್ವೀತಿಯ, ಶಾಂತಾ ಹತ್ತಳ್ಳಿ 81 % ತೃತೀಯ ಸ್ಥಾನ ಪಡೆದಿದ್ದಾರೆ, 13 ಮಕ್ಕಳು ಪರೀಕ್ಷೆ ಬರೆದಿದ್ದು ಎಲ್ಲರೂ ಪಾಸಾಗಿದ್ದಾರೆ.
ಉತ್ತಿರ್ಣರಾದ ಶಾಲೆಯ ವಿಧ್ಯಾರ್ಥಿಗಳನ್ನು ಶಾಲಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ ಕಿತ್ತೂರ, ಕಾರ್ಯದರ್ಶಿ ಮಂಜುನಾಥ ಮೋಕಾಶಿ, ಮುಖ್ಯೋಪಾಧ್ಯಾಯ ಎಸ್ ಆ‌ರ್ ನರಸಣ್ಣನವರ, ಹಾಗೂ ಉಳವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ ಮತ್ತು ಸಹ ಶಿಕ್ಷಕ ವೃಂದ, ಉಳವಿ ಗ್ರಾಮದ ಸಾರ್ವಜನಿಕರು ಅಭಿನಂದಿಸಿದ್ದಾರೆ.